• search

ಹುಡುಗಿಯ ಹಿಂದೆಬಿದ್ದು ಸತ್ತ ಇಬ್ಬರು ಭೂಪರು

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  bangalore-love-triangle-two-youths-murdered
  ಬೆಂಗಳೂರು,ಮಾ. 25: ಕಿಶೋರ್‌ (28) ಮತ್ತು ಕೇಶವ (25) ಇಬ್ಬರೂ ಹಳೆಯ ಸ್ನೇಹಿತರು. ಆದರೆ ಈ ಗೆಳೆಯರಿಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಇದೇ ವಿಷಯಕ್ಕೆ ಹಲವು ಬಾರಿ ಗಲಾಟೆಯಾಡಿದ್ದರು. ದುರಂತವೆಂದರೆ ಈ ತ್ರಿಕೋನ ಪ್ರೇಮ, ವಿಕೋಪಕ್ಕೆ ಹೋಗಿದೆ. ಶನಿವಾರ ರಾತ್ರಿ ಸಿನಿಮೀಯ ರೀತಿಯಲ್ಲಿ ಇಬ್ಬರ ಮಧ್ಯೆ ಸಂಘರ್ಷ ನಡೆದು ಇಬ್ಬರೂ ಹತ್ಯೆಗೀಡಾಗಿದ್ದಾರೆ.

  ಈ ವಿಲಕ್ಷಣ ಘಟನೆ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಗೊರಗುಂಟೆಪಾಳ್ಯದಲ್ಲಿ ನಡೆದಿದೆ. ಈ ಸ್ನೇಹಿತರು 10ನೇ ತರಗತಿ ಓದುತ್ತಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಪ್ರತಿ ದಿನ ಇಬ್ಬರು ಅಕೆಯ ಮನೆಯ ಮುಂದೆ ಓಡಾಡುತ್ತಿದ್ದರು. ಈ ಸಂದರ್ಭದಲ್ಲಿ ಹಲವು ಬಾರಿ ಗಲಾಟೆ ನಡೆದಿದೆ.

  ಗೊರುಗುಂಟೆ ಪಾಳ್ಯದ ಕೇಶವ 6 ತಿಂಗಳಿಂದ ಶಿವ ದೇವಸ್ಥಾನದ ಬಳಿರುವ ಸೈಬರ್‌ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಕೃಷ್ಣಾನಂದ ನಗರದ ಕಿಶೋರ್‌ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಶನಿವಾರವೂ ಹುಡುಗಿ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ರಾತ್ರಿ 7.30ರ ಸಮಯದಲ್ಲಿ ಕೇಶವ್‌ ಕೆಲಸ ಮಾಡುತ್ತಿದ್ದ ಸೈಬರ್‌ ಕೆಫೆಗೆ 3-4 ಹುಡುಗರ ಜತೆ ಬಂದ ಕಿಶೋರ್‌ ಗಲಾಟೆ ಮಾಡಿದ್ದಾನೆ. ಲಾಂಗ್‌, ಮಚ್ಚುಗಳಿಂದ ದಾಳಿ ಮಾಡಿ ಕೇಶವನನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.

  ಕೆಫೆಯ ಸಮೀಪದಲ್ಲೇ ಇದ್ದ ಕೇಶವನ ಸ್ನೇಹಿತರು ಘಟನೆಯನ್ನು ನೋಡಿದ ಕೂಡಲೇ ಕಿಶೋರ್‌ ಗ್ಯಾಂಗ್‌ ಮೇಲೆ ದಾಳಿ ನಡೆಸಿದ್ದಾರೆ. ಅವರು ತಂದ ಮಾರಾಕಾಸ್ತ್ರಗಳಿಂದಲೇ ಕಿಶೋರ್‌ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಜಂಟಿ ಪೊಲೀಸ್‌ ಅಯುಕ್ತ ಪ್ರಣಬ್‌ ಮೊಹಂತಿ, ಉತ್ತರ ವಲಯ ಡಿಸಿಪಿ ರೇವಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Bangalore: A love triangle led to the murder of two youths, who were in love with a same girl, near Goragunte palya in RMC Yard police limits on Saturday night (Mar 24). The deceased, Kishore (19) and Keshava Murthy (25), were hacked to death by each other’s gangs.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more