ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ಗಂಟೆಗಳಲ್ಲಿ ಯಡಿಯೂರಪ್ಪಗೆ ಸಿಎಂ ಪಟ್ಟ

By Mahesh
|
Google Oneindia Kannada News

BS Yeddyurappa
ನವದೆಹಲಿ, ಮಾ.21: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನೀಡಿದ್ದ 48 ಗಂಟೆಗಳ ಗಡುವು ಮುಗಿದಿದೆ. ಆದರೆ, ಇದೀಗ ಬಂದಿರುವ ಸುದ್ದಿಯಂತೆ ಮುಂದಿನ 24 ಗಂಟೆಗಳಲ್ಲಿ ಯಡಿಯೂರಪ್ಪ ಅವರು ಮತ್ತೆ ಸಿಎಂ ಸ್ಥಾನಕ್ಕೇರುವುದು ಗ್ಯಾರಂಟಿ ಎಂದು ದೆಹಲಿ ಮಾಧ್ಯಮಗಳು ವರದಿ ಮಾಡಿದೆ.

ಬುಧವಾರ(ಮಾ.21) ಸಂಜೆ 5.45ಕ್ಕೆ ಬಿಇಐಎಲ್ ನಿಂದ ದೆಹಲಿಗೆ ಯಡಿಯೂರಪ್ಪ ತೆರಳಲಿದ್ದಾರೆ. ಬಸವರಾಜ ಬೊಮ್ಮಾಯಿ, ಸಿಎಂ ಉದಾಸಿ ಅವರಿಗೆ ಸಾಥ್ ನೀಡಲಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಪೂರ್ವ ನಿಗದಿಯಂತೆ ಬುಧವಾರ ಮಧ್ನಾಹ್ನ ಸದನದಲ್ಲಿ ಸದಾನಂದ ಗೌಡರು ಚೊಚ್ಚಲ ಬಜೆಟ್ ಪುಸ್ತಕ ಓದಿ ಮಡಿಚಿಟ್ಟ ತಕ್ಷಣವೇ, ಹೈಕಮಾಂಡಿಗೆ ಕರೆ ಹಚ್ಚಿದ ಯಡಿಯೂರಪ್ಪ ಅವರು ತಮ್ಮ ಆಜನ್ಮ ಸಿದ್ಧ ಹಕ್ಕು ಎಂಬಂತೆ 'ಸಿಎಂ ಪಟ್ಟ'ಕ್ಕೆ ಮತ್ತೆ ಕೋರಿಕೆ ಮಂಡಿಸಿದರು.

ಲಭ್ಯ ಮಾಹಿತಿಯ ಪ್ರಕಾರ ಮಾ.30ರ ನಂತರ ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಕುರ್ಚಿಯಲ್ಲಿ ಪ್ರತಿಷ್ಠಾಪಿಸುವುದಾಗಿಯೂ, ಈ ಕುರಿತಾದ ಪ್ರಕಟಣೆ ಮುಂದಿನ 24 ಗಂಟೆಗಳಲ್ಲಿ ಹೊರ ಬೀಳಲಿದೆ ಎಂದು ದೆಹಲಿ ಮಾಧ್ಯಮ ವಲಯದಲ್ಲಿ ಸುದ್ದಿ ಹಬ್ಬಿದೆ.

ಯಡಿಯೂರಪ್ಪಗೆ ಪ್ಲಸ್ ಪಾಯಿಂಟ್ಸ್:

* ಯಡಿಯೂರಪ್ಪ ಪ್ರಚಾರಕ್ಕೆ ಹೋಗದ ಕಾರಣ ಉಡುಪಿ ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲುಂಟಾಗಿದೆ ಎಂಬ ಅಂಶವನ್ನು ಬಿಜೆಪಿ ಹೈ ಕಮಾಂಡ್ ಗಂಭೀರವಾಗಿ ತೆಗೆದುಕೊಂಡಿದೆ.
* ಆರೆಸ್ಸೆಸ್ ಕೂಡಾ ಪ್ರಥಮ ಬಾರಿಗೆ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದೆ.
* ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ, ಯಡಿಯೂರಪ್ಪ ಅವರ ನಾಯಕತ್ವ ಅತ್ಯಗತ್ಯ.
* ಸುಮಾರು 60-70 ಶಾಸಕರ ಬೆಂಬಲ ಕಳೆದುಕೊಂಡು ಸರ್ಕಾರ ಉಳಿಸಿಕೊಳ್ಳುವುದು ಕಷ್ಟ ಎಂಬ ಅಂಶ ಕೂಡಾ ಪರಿಣಾಮಕಾರಿಯಾಗಿದೆ.

English summary
Looks like former Karnataka Chief Minister BS Yeddyurappa's ultimatum has worked. BJP high command with consent with RSS is likely to reinstate him as the CM once again within 48 hours from today(Mar.21) sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X