ಅಂಚೆ ಮತ ಎಣಿಕೆ: ಸುನಿಲ್ ಗೆ ಆರಂಭಿಕ ಮುನ್ನಡೆ

ಮೊದಲಿಗೆ ಅಂಚೆ ಮೂಲಕ ಬಂದ ಮತಗಳ ಎಣಿಕೆ ಕಾರ್ಯ ಆರಂಭಿಸಲಾಗಿದೆ. ಸುಮಾರು 1,000 ಮತಗಳನ್ನು ಎಣಿಸಲಾಗುತ್ತದೆ. ಮೊದಲ ಎರಡು ಅಂಚೆ ಮತಗಳು ಬಿಜೆಪಿ ಪಾಲಾದರೂ ನಂತರ ಕಾಂಗ್ರೆಸ್ ಪರ ಮತಗಳು ಹೆಚ್ಚಾಗಲಾರಂಭಿಸಿದೆ.
ಬಿಜೆಪಿಯ ಸುನಿಲ್ ಕುಮಾರ್ ಅವರು ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ಅವರಿಗಿಂತ 160 ಮತಗಳಿಂದ ಮುಂದಿದ್ದಾರೆ.
ಮಾ.21ರಂದು ಕುಂಜಿಬೆಟ್ಟಿನಲ್ಲಿರುವ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮತಗಳ ಎಣಿಕೆ ನಡೆಯುತ್ತಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿ ಕಾರಿ ಡಾ.ಎಂಟಿ ರೇಜು ಹೇಳಿದ್ದಾರೆ.
127 ಅಧಿಕಾರಿಗಳು 14 ಟೇಬಲ್ ಗಳಲ್ಲಿ ಮತ ಎಣಿಕೆ ಕಾರ್ಯ ಶುರುಮಾಡಿದ್ದಾರೆ. ಒಟ್ಟು 16 ಸುತ್ತಿನ ಮತ ಎಣಿಕೆ ಕಾರ್ಯ ನಡೆಯಲಿದೆ. ಸುಮಾರು 11 ಗಂಟೆ ವೇಳೆಗೆ ಸ್ಪಷ್ಟ ಫಲಿತಾಂಶ ಸಿಗುವ ನಿರೀಕ್ಷೆಯಿದೆ.












Click it and Unblock the Notifications