ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ : ಚಪಾತಿ ಪರೋಟ ಮೇಲಿನ ತೆರಿಗೆ ಇಳಿಕೆ

By Prasad
|
Google Oneindia Kannada News

VAT : Beedi taxed, Chapati spared
ಬೆಂಗಳೂರು, ಮಾ. 21 : ಪ್ರಪ್ರಥಮ ಬಾರಿಗೆ ಆಯವ್ಯಯವನ್ನು ಮಂಡಿಸಿರುವ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಮೌಲ್ಯವರ್ಧಿತ ತೆರಿಗೆಗಳಲ್ಲಿ ಸಾಕಷ್ಟು ಮಾರ್ಪಾಟುಗಳನ್ನು ಮಾಡಿದ್ದು, ಶ್ರೀಮಂತರ ಮೇಲೆ ತುಸು ಕರವನ್ನು ಹೇರಿ, ಬಡವರ ಮೇಲಿನ ಭಾರವನ್ನು ಕಡಿಮೆ ಮಾಡಲು ಯತ್ನಿಸಿದ್ದಾರೆ.

ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ.1.25ರಷ್ಟು ಇಳಿಸಿ ಡೀಸೆಲ್ ವಾಹನ ಬಳಸುವವರ ಮುಖದಲ್ಲಿ ನಗೆ ಚಿಮ್ಮಿಸಿದ್ದಾರೆ. ಆದರೆ, ಬೀಡಿ, ಸಿಗರೇಟು ಸೇದುವವರ ತುಟಿಗಳನ್ನು, ಕಿಡಿ ಹಚ್ಚುವ ಮೊದಲೇ ಸುಟ್ಟುಬಿಟ್ಟಿದ್ದಾರೆ. ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಎಂಥ ವಸ್ತುಗಳ ಮೇಲಿನ ಮೌಲ್ಯವರ್ಧಿತ ತೆರಿಗೆ ಏರಿಸಲಾಗಿದೆ, ಯಾವುದರ ಮೇಲಿನ ಮೌಲ್ಯವರ್ಧಿತ ತೆರಿಗೆ ಇಳಿಸಿಲಾಗಿದೆ ವಿವರಗಳನ್ನು ನೋಡಿರಿ.

ಮೌಲ್ಯವರ್ಧಿತ ತೆರಿಗೆ ಇಳಿಕೆ

1) ಭತ್ತ, ಅಕ್ಕಿ, ಗೋಧಿ, ಬೇಳೆಕಾಳುಗಳು ಹಾಗೂ ಅಕ್ಕಿ ಮತ್ತು ಗೋಧಿಯ ಪದಾರ್ಥಗಳ ಮೇಲಿನ ತೆರಿಗೆ ವಿನಾಯಿತಿಯನ್ನು 2012ರ ಏಪ್ರಿಲ್‌ನಿಂದ ಮತ್ತೊಂದು ವರ್ಷದವರೆಗೆ ಮುಂದುವರಿಸಲಾಗುವುದು.

2) ಬೇಯಿಸಲು ತಯಾರಿರುವ ಚಪಾತಿ ಮತ್ತು ಪರೋಟಗಳ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5ಕ್ಕೆ ಇಳಿಸಲಾಗುವುದು.

3) ಕಚ್ಛಾ ಹತ್ತಿ ಮೇಲಿನ ತೆರಿಗೆಯನ್ನು ಶೇ.5ರಿಂದ ಶೇ.2ಕ್ಕೆ ಇಳಿಸಲಾಗುವುದು.

4) ಒಣಮೆಣಸಿನಕಾಯಿ ಮೇಲಿನ ತೆರಿಗೆಯನ್ನು ಶೇ.5ರಿಂದ ಶೇ.2ಕ್ಕೆ ಇಳಿಸಲಾಗುವುದು. ಇದಲ್ಲದೆ, ಅವುಗಳ ಅಂತರರಾಜ್ಯ ಮಾರಾಟ ಮೇಲಿನ ಕೇಂದ್ರ ಮಾರಾಟ ತೆರಿಗೆಯನ್ನು ಶೇ.1ರಿಂದ ಶೇ.2ಕ್ಕೆ
ಏರಿಸಲಾಗುವುದು.

5) ಸರ್ಜಿಕಲ್ ಪಾದರಕ್ಷೆಗಳ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5ಕ್ಕೆ ಇಳಿಸಲಾಗುವುದು.

6) ಬ್ರೇಲ್ ಕೈಗಡಿಯಾರಗಳನ್ನು ತೆರಿಗೆಯಿಂದ ವಿನಾಯಿತಿಗೊಳಿಸಲಾಗುವುದು.

7) ಕಪ್ಪು ಹಲಗೆಗಳ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5ಕ್ಕೆ ಇಳಿಸಲಾಗುವುದು.

8) ಬಂಗಾರ ಮತ್ತಿತರೆ ಬೆಲೆಬಾಳುವ ಲೋಹಗಳ ಆಭರಣಗಳು ಮತ್ತು ವಸ್ತುಗಳು ಹಾಗೂ ಅಮೂಲ್ಯ ಮತ್ತು ಅರೆ-ಅಮೂಲ್ಯ ಹರಳುಗಳ ಮೇಲಿನ ತೆರಿಗೆಯನ್ನು ಶೇ.2ರಿಂದ ಶೇ.1ಕ್ಕೆ ಇಳಿಸಲಾಗುವುದು.

9) ಸಿದ್ಧಪಡಿಸಿದ ಉಡುಪುಗಳ ತಯಾರಿಕೆ ಮತ್ತು ಕಸೂತಿ ಕೆಲಸಗಳ ಗುತ್ತಿಗೆ ಕಾಮಗಾರಿಗಳ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5ಕ್ಕೆ ಇಳಿಸಲಾಗುವುದು.

10) ಹೊರದೇಶಕ್ಕೆ ಪ್ರಯಾಣ ಮಾಡುವ ಹಡಗುಗಳಿಗೆ ಮಾರಾಟ ಮಾಡುವ ಫರ್ನೇಸ್ ಆಯಿಲ್ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5ಕ್ಕೆ ಇಳಿಸಲಾಗುವುದು.

11) ನಾಫ್ತಾ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5ಕ್ಕೆ ಇಳಿಸಲಾಗುವುದು.

ಸಂಪನ್ಮೂಲ ಕ್ರೋಢೀಕರಣ ಕ್ರಮಗಳು

1) ಬೀಡಿಗಳ ಮೇಲೆ ಶೇ.5ರ ಮೌಲ್ಯವರ್ಧಿತ ತೆರಿಗೆ ವಿಧಿಸಲಾಗುವುದು.

2) ಸಿಗರೇಟುಗಳು ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ.15ರಿಂದ ಶೇ.17ಕ್ಕೆ ಏರಿಸಲಾಗುವುದು.

3) ಪ್ಲಾಸ್ಟಿಕ್‌ನಿಂದ ನೇಯ್ದ ಬಟ್ಟೆಗಳ ಮೇಲೆ ಶೇ.5ರ ಮೌಲ್ಯವರ್ಧಿತ ತೆರಿಗೆ ವಿಧಿಸಲಾಗುವುದು.

ಮಾರಾಟ ತೆರಿಗೆ

1) ಡೀಸೆಲ್ ಮೇಲಿನ ತೆರಿಗೆಯನ್ನು ಶೇ.1.25ರಷ್ಟು ಇಳಿಸಲಾಗಿದ್ದು, ತೆರಿಗೆ ಶೇ.18ರಿಂದ ಶೇ.16.75ಕ್ಕೆ ಇಳಿಯುತ್ತದೆ.

2) ಹೊರದೇಶಗಳಿಗೆ ಪ್ರಯಾಣ ಮಾಡುತ್ತಿರುವ ಹಡಗುಗಳಿಗೆ ಮಾರಾಟ ಮಾಡುವ ಹೈ ಫ್ಲಾಶ್ ಹೈ ಸ್ಪೀಡ್ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.18ರಿಂದ ಶೇ.1ಕ್ಕೆ ಇಳಿಕೆ.

ವಿಲಾಸ ತೆರಿಗೆ

1) ತಾತ್ಕಾಲಿಕ ಶೆಡ್‌ಗಳಲ್ಲಿ ನಡೆಸಲಾಗುತ್ತಿರುವ ಕಲ್ಯಾಣ ಮಂಟಪಗಳ ಮೇಲೆ ಶೇ.10ರಷ್ಟು ತೆರಿಗೆ.

2) ವಿಚಾರ ಸಂಕಿರಣ ಸಭಾಂಗಣ, ಸಮ್ಮೇಳನ ಸಭಾಂಗಣ ಮತ್ತು ಅಂತಹವುಗಳ ಮೇಲೆ ಶೇ.10ರಷ್ಟು ತೆರಿಗೆ.

English summary
Karnataka Chief Minister cum Finance Minister DV Sadananda Gowda has presented his first state budget on March 21, 2012. He has made lots of changes on Value Added Tax (VAT). See the details here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X