ಸಂಸದ ಅನಂತ್ ಕೈಲಿದೆ ಯಡಿಯೂರಪ್ಪ ಭವಿಷ್ಯ

ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಯಶವಂತ್ ಸಿನ್ಹಾ, ಎಸ್ಎಸ್ ಅಹ್ಲುವಾಲಿಯಾ. ಅನಂತಕುಮಾರ್ ಅವರನ್ನೊಳಗೊಂಡ ಕೋರ್ ಕಮಿಟಿ ತನ್ನ ಸಭೆಯನ್ನು ಮುಂಚಿತವಾಗಿ ಆರಂಭಿಸಿದೆ. ರಾಜ್ಯಸಭೆ ಅಭ್ಯರ್ಥಿಗಳ ಬಗ್ಗೆ ಮಾತುಕತೆ ಆರಂಭಿಸಿರುವ ಕೋರ್ ಕಮಿಟಿಯಲ್ಲಿ ಯಡಿಯೂರಪ್ಪ ಅವರ ಬೇಡಿಕೆ ಬಗ್ಗೆ ಚರ್ಚಿತವಾಗುತ್ತಿದೆ.
ರಾತ್ರಿ ವೇಳೆಗೆ ದೆಹಲಿಗೆ ಬರುವ ಯಡಿಯೂರಪ್ಪ ಅವರನ್ನು ಯಾರು ಯಾರು ಬರಮಾಡಿಕೊಳ್ಳಬೇಕು. ಯಾರು ಭೇಟಿ ಮಾಡಬೇಕು? ಬೇಡಿಕೆಗೆ ಎಷ್ಟರಮಟ್ಟಿಗೆ ಒಪ್ಪಿಕೊಳ್ಳಬೇಕು ಎಂಬ ನೀತಿ ನಿಯಮಗಳನ್ನು ನೋಡಿಕೊಳ್ಳುವಂತೆ ಅನಂತ್ ಕುಮಾರ್ ಗೆ ಹೈಕಮಾಂಡ್ ಸೂಚಿಸಿದೆ.
ಯಡಿಯೂರಪ್ಪ ಅವರನ್ನು ಮಟ್ಟ ಹಾಕುವುದರ ಜೊತೆಗೆ ಬಣ ಬದಲಾಯಿಸಿರುವ ಜಗದೀಶ್ ಶೆಟ್ಟರ್ ಗೂ ಕುತ್ತು ತರಲು ಅನಂತ್ ಯೋಜಿಸಿರುವ ಸಾಧ್ಯತೆಯಿದೆ. ಯಡಿಯೂರಪ್ಪಗೆ ಅಕಸ್ಮಾತ್ ಪಟ್ಟ ಸಿಕ್ಕರೂ ಕಾಲು ಮುರಿದು ಕೂರಿಸುವ ಯೋಚನೆಯಲ್ಲಿದ್ದಾರೆ ಮಿ. ಅನಂತ್.












Click it and Unblock the Notifications