ಈ ಬಜೆಟ್ ನಲ್ಲಿ ಬೆಂಗಳೂರಿಗೆ ಏನು ಸಿಕ್ತು ?

BBMP gets lion share in budget
ಬೆಂಗಳೂರು, ಮಾ.21: ಪ್ರಥಮ ಬಾರಿಗೆ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು, ಕೃಷಿ, ನೀರಾವರಿ ಜೊತೆಗೆ ಬೆಂಗಳೂರು ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಿದ್ದಾರೆ.

* ಬೈಯಪ್ಪನ ಹಳ್ಳಿಯಿಂದ ಮಹಾತ್ಮಾ ಗಾಂಧಿ ರಸ್ತೆವರೆಗೆ 6.5 ಕಿ.ಮೀ. ಮಾರ್ಗ-1ನ್ನು ಉದ್ಘಾಟಿಸುವುದರ ಮೂಲಕ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಾಕಾರಗೊಂಡಿದೆ. ಮುಂದಿನ 9 ತಿಂಗಳೊಳಗೆ ಇನ್ನೂ 10.4 ಕಿ.ಮೀ. ಮಾರ್ಗವನ್ನು ಪ್ರಾರಂಭಿಸಲು ಯೋಜಿಸಲಾಗಿದೆ.

* ಡಿಸೆಂಬರ್ 2013ರೊಳಗಾಗಿ ಇಡೀ ಹಂತ-1ನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಮೆಟ್ರೋ ಯೋಜನೆಗಾಗಿ 500 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ.

* ಒಟ್ಟು 26,405 ಕೋಟಿ ರೂ.ಗಳ ವೆಚ್ಚದಲ್ಲಿ 72 ಕಿ.ಮೀ. ಒಟ್ಟು ಉದ್ದದ 4 ವಿಸ್ತರಣಾ ಮಾರ್ಗಗಳು ಮತ್ತು 2 ಹೊಸ ಮಾರ್ಗಗಳನ್ನು ಒಳಗೊಂಡ ಹಂತ-2ಕ್ಕೆ ರಾಜ್ಯ ಸರ್ಕಾರವು ಅನುಮೋದನೆ ನೀಡಿದೆ.

* ಪ್ರಯಾಣಿಕರಿಗೆ ಹೆಚ್ಚು ಅಗತ್ಯವಾದ ಕೊನೆಯ ಹಂತದವರೆಗಿನ ಸಂಪರ್ಕವನ್ನು ಈ 4 ವಿಸ್ತರಣಾ ಮಾರ್ಗಗಳು ಕಲ್ಪಿಸುತ್ತವೆ.

* ಬೆಂಗಳೂರಿನ ಕೆಲವು ಜನನಿಬಿಡ ಮತ್ತು ಸಂಚಾರ ದಟ್ಟಣೆ ಪ್ರದೇಶಗಳ ಮೂಲಕ ಹಾದು ಹೋಗುವ ಎರಡು ಹೊಸ ಮಾರ್ಗಗಳು ಮಾಹಿತಿ ತಂತ್ರಜ್ಞಾನದ ಉದ್ಯಮಗಳಿಗೆ ಸಂಪರ್ಕ ಕಲ್ಪಿಸುತ್ತವೆಂದು ನಿರೀಕ್ಷಿಸಲಾಗಿದೆ.

* ಹಂತ-1 ರಲ್ಲಿನಂತೆ, ಹಂತ-2ರಲ್ಲೂ ಭಾಗಿಯಾಗಲು ಹಾಗೂ ಭಾಗಶ: ಹಣಕಾಸು ಒದಗಿಸಲು ಭಾರತ ಸರ್ಕಾರವನ್ನು ಕೋರಲಾಗಿದೆ.

* 2ನೇ ಹಂತದ ಕಾಮಗಾರಿಯು 2012-13ರಲ್ಲಿ ಪ್ರಾರಂಭಗೊಂಡು, 2017-18ರೊಳಗೆ ಪೂರ್ಣಗೊಳ್ಳುವುದೆಂದು ಯೋಜಿಸಲಾಗಿದೆ.

* ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 2012-13 ನೇ ಸಾಲಿನಲ್ಲಿ 426 ಕೋಟಿ ರೂ ಅಂದಾಜು ವೆಚ್ಚದಲ್ಲಿ ಒಟ್ಟು 51.5 ಕಿ. ಮೀ. ಉದ್ದದ ಐದು ಮುಖ್ಯವಾದ ಸಿಗ್ನಲ್ ಮುಕ್ತ ಕಾರಿಡಾರ್‌ಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ.

* ಇದರ ಜೊತೆಗೆ 200 ಕೋಟಿ ರೂಗಳ ಒಟ್ಟು ವೆಚ್ಚದಲ್ಲಿ ಟೆಂಡರ್‌ಶ್ಯೂರ್ ಡಿಸೈನ್ ನಾರ್ಮ್ಸ್ ಮೇಲೆ ಪ್ರಮುಖ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

* 2012-13ರಲ್ಲಿ 8 ವಾಹನ ನಿಲುಗಡೆ ಸಮುಚ್ಛಯಗಳು ಮತ್ತು ಘನ ತ್ಯಾಜ್ಯ ನಿರ್ವಹಣಾ ಮೂಲ ಸೌಲಭ್ಯ ಯೋಜನೆಗಳ ನಿರ್ಮಾಣವನ್ನು ತಲಾ 200
ಕೋಟಿ ರೂ ಒಟ್ಟು ವೆಚ್ಚದಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ.

* ಹಸಿ ಘನ ತ್ಯಾಜ್ಯವನ್ನು ಬಳಸಿ ಮೀಥೇನ್ ಉತ್ಪಾದಿಸುವ 16 ಯೋಜನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುವುದು.

* 2012-13ನೇ ಸಾಲಿನಲ್ಲಿ ರಸ್ತೆ, ಉದ್ಯಾನವನ ಮತ್ತು ಘನ ತ್ಯಾಜ್ಯ ನಿರ್ವಹಣಾ ಮೂಲ ಸೌಲಭ್ಯ ಸೇರಿದಂತೆ ಪ್ರಮುಖ ಆಯ್ದ ಯೋಜನೆಗಳಿಗಾಗಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಒಟ್ಟು 1000 ಕೋಟಿ ರೂ. ಆರ್ಥಿಕ ನೆರವು ಒದಗಿಸಲಾಗುವುದು.

* ನಗರಕ್ಕೆ ಹೆಚ್ಚುವರಿ 500 ಎಂ.ಎಲ್.ಡಿ. ನೀರನ್ನು ತರುವ ಮತ್ತು ಅದರಿಂದ ನಗರ ಹೊರ ವಲಯಗಳ ನೀರಿನ ಬವಣೆ ನೀಗಿಸುವ ಕಾವೇರಿ ನೀರು ಸರಬರಾಜು ಯೋಜನೆ ಘಟ್ಟ-4 ಹಂತ-2 ಸೆಪ್ಟಂಬರ್ 2012 ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

* ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ 1000 ಕೋಟಿ ರೂ. ಹಂಚಿಕೆ ಮಾಡಲಾಗಿದೆ. [ಬಜೆಟ್ ಮುಖ್ಯಾಂಶಗಳನ್ನ ಓದಿ]

* ಬೆಂಗಳೂರು ನಗರದ ಅಗಲಮುಖ ವಿಸ್ತೀರ್ಣವರ್ಧನೆಯ ಬದಲಾಗಿ ಊರ್ಧ್ವಮುಖ ಬೆಳವಣಿಗೆಗೆ ಸಹಕಾರಿಯಾಗುವಂತೆ ಸರ್ಕಾರವು ಒಂದು ಕಾರ್ಯನೀತಿಯನ್ನು ರೂಪಿಸಲಿದೆ.

* ಕೆಂಪೇಗೌಡ ಬಡಾವಣೆ ಅಭಿವೃದ್ಧಿ, ಅಡಚಣೆರಹಿತ ಸಂಪರ್ಕಕ್ಕಾಗಿ ಹೊರವಲಯ ರಸ್ತೆ ಸುಧಾರಣೆ ಮತ್ತು ಎತ್ತರಿಸಿದ ರಸ್ತೆಗಳ ನಿರ್ಮಾಣವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಯೋಜಿಸಿದೆ.

* 2012-13ರಲ್ಲಿ ಪೆರಿಫಿರಲ್ ಹೊರ ವರ್ತುಲ ರಸ್ತೆ ಕಾಮಗಾರಿಯ ಯೋಜನಾ ವರದಿ ತಯಾರಿಕೆ ಮತ್ತು ಭೂಸ್ವಾಧೀನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು.

* ರಾಜ್ಯದ ನಗರ ಪ್ರದೇಶಗಳಲ್ಲಿ ಕೆರೆಗಳು ಮತ್ತು ಜಲಘಟಕಗಳನ್ನು ಸಂರಕ್ಷಿಸುವ ಅಗತ್ಯದ ಬಗ್ಗೆ ಸರ್ಕಾರವು ತೀವ್ರ ಕಾಳಜಿಯನ್ನು ಹೊಂದಿದೆ.

* ಕೆರೆಗಳ ಸಂರಕ್ಷಣೆ, ಪುನರ್ ಸ್ಥಾಪನೆ ಮತ್ತು ಜೀರ್ಣೋದ್ಧಾರಕ್ಕಾಗಿ ಆಯವ್ಯಯದಲ್ಲಿ 50 ಕೋಟಿ ರೂ. ಗಳನ್ನು ಹಂಚಿಕೆ ಮಾಡಿದ್ದು, ಅದಕ್ಕೆ ಪೂರಕವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳು ಸಮಾನ ಮೊತ್ತವನ್ನು ಭರಿಸಲಿವೆ.

* ವಿವಿಧ ಸಂಸ್ಥೆಗಳ ಮೂಲಕ ಬೆಂಗಳೂರು ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆ ಮತ್ತು ಕಾಮಗಾರಿಗಳಿಗಾಗಿ ಒಟ್ಟಾರೆ 5,500 ಕೋಟಿ ರೂ.ಗಳನ್ನು ಒದಗಿಸಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+