Politics is the last RESORT for the scoundrels?

bjp-battle-politics-last-resort-scoundrels-gb-bhaw
ಬೆಂಗಳೂರು, ಮಾ.20: ಐರ್ಲೆಂಡಿನ ನಾಟಕಕಾರ ನೊಬೆಲ್ ಪಾರಿತೋಷಕ ಪುರಸ್ಕೃತ ಜಾರ್ಜ್ ಬರ್ನಾರ್ಡ್ ಷಾ ಬದುಕಿದ್ದಿದ್ದರೆ ಇಂದಿನ ರಾಜಕಾರಣಿಗಳು ಅದರಲ್ಲೂ ಕರ್ನಾಟಕದ ಇಂದಿನ (not all) ಆಡಳಿತಾರೂಢ ರಾಜಕಾರಣಿಗಳ ನಾಟಕವನ್ನು ನೋಡಿ ಪಾಪಾ ಏನನ್ನುತ್ತಿದ್ದರೋ?

ಏಕೆಂದರೆ ಅಂದು ಅವರು ಹೇಳಿದ್ದು Politics is the last resort for the scoundrels ಅಂತ. ಆದರೆ ಈ scoundrelಗಳು resortಗೆ ಬೇರೆಯದೇ ಅರ್ಥ ನೀಡಿ ಅದನ್ನೇ ತಮ್ಮ 'ಸ್ಥಾವರ'ವಾಗಿಸಿಕೊಂಡಿದ್ದಾರೆ. The last resort for the Political Scoundrels are RESORTS ಅಂತ ಸ್ವತಃ ಅವರೇ ಬಗೆದಿದ್ದಾರೆ. ಎಲ್ಲಿಗೆ ಬಂತು ರಾಜಕೀಯ ಅಂದರೆ ಅದು ರೆಸಾರ್ಟುಗಳನ್ನು ತಲುಪಿಕೊಂಡಿವೆ ಅನ್ನಬಹುದು.

ಇದು ರಾಜ್ಯದ ಇಂದಿನ ಆಡಳಿತಾರೂಢ ರಾಜಕಾರಣಿಗಳಿಗಷ್ಟೇ ಅನ್ವಯವಾಗುವುದೋ? ಎಂದು ಇತರೆ ಪಕ್ಷಗಳ ನೇತಾರರು ಮುಸಿಮುಸಿ ನಗುವುದು ಬೇಡ. ಏಕೆಂದರೆ ಈ ಹಿಂದೆಯೇ ದೇಶದ ರಾಜಕೀಯ ಹೊಸಲು ನಾರುತ್ತಿರುವುದನ್ನು ಕಂಡು ಜನ ಹೀಗೂ ಮಾತನಾಡಿದ್ದಾರೆ - Scoundrelಗಳಿಗೆ ರಾಜಕೀಯವೆಂಬುದು last resort ಅಲ್ಲ. ಮೊದಲ resort ಸಹ.

ಅದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿರುವ ನಮ್ಮ ರಾಜಕಾರಣಿಗಳು ಮನೆ-ಮಾನ ಬಿಟ್ಟು ಆ resortಗಳನ್ನೇ ಬೆಚ್ಚನೆಯ ಮನೆಯಾಗಿಸಿಕೊಂಡಿದ್ದಾರೆ. ಮಾನ? ಬೀದಿಯಲ್ಲಿ ಹರಾಜಿಗಿಟ್ಟಿದ್ದಾರೆ. ಜನಕ್ಕೆ ಯಾವ ಕಡೆಯಿಂದ ನಗಬೇಕೋ ತಿಳಿಯದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+