ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾನಂದ ಬೆನ್ನ ಹಿಂದೆ ಅಶೋಕ್, ಈಶ್ವರಪ್ಪ

By Mahesh
|
Google Oneindia Kannada News

R Ashok
ಬೆಂಗಳೂರು, ಮಾ.19: ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರೇ ಮಂಡಿಸಲಿದ್ದಾರೆ ಇದರಲ್ಲಿ ಎಳ್ಳಷ್ಟು ಸಂಶಯಬೇಡ ಎಂದು ಗೃಹ ಸಚಿವ ಆರ್ ಅಶೋಕ್ ಅವರು ಹೇಳಿದ್ದಾರೆ.

ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು ಕರೆದಿರುವ ಸಭೆಗೆ ನನಗೆ ಆಹ್ವಾನ ಸಿಕ್ಕಿಲ್ಲ. ಸಿಕ್ಕಿದ್ದರೂ ನಾನು ಹೋಗಲು ಆಗುತ್ತಿಲ್ಲ. ಗುಪ್ತ ಸಭೆ, ರೆಸಾರ್ಟ್ ರಾಜಕೀಯದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಡಿವಿ ಸದಾನಂದ ಗೌಡರು ಬಜೆಟ್ ಮಂಡಿಸಲಿ ಎಂದು ಪರಮಪೂಜ್ಯ ಸಿದ್ದಗಂಗಾಶ್ರೀಗಳು, ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿಗಳು ಆಶೀರ್ವದಿಸಿದ್ದಾರೆ. ಬಜೆಟ್ ಪುಸ್ತಕ ಸೋಮವಾರ ಮುದ್ರಣಕ್ಕೆ ಹೋಗುತ್ತದೆ.

ಜಗದೀಶ್ ಶೆಟ್ಟರ್ ಅವರಿಗೆ ಹೊಸ ಖಾತೆ(ಹಣಕಾಸು) ನೀಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ಅಶೋಕ್ ಹೇಳಿದ್ದಾರೆ.

ಯಡಿಯೂರಪ್ಪ ಹಾಗೂ ಬೆಂಬಲಿಗರು ಕರೆದ ಸಭೆ ಹಾಗೂ ರೆಸಾರ್ಟ್ ಹೋಗಲು ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಕೂಡಾ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಯಡಿಯೂರಪ್ಪಕ್ಕೆ ಸೂಕ್ತ ಸ್ಥಾನಮಾನಕ್ಕಾಗಿ ಆಗ್ರಹಿಸಿ ದೆಹಲಿಗೆ ತೆರಳಲಿರುವ ಯಡಿಯೂರಪ್ಪ ಬೆಂಬಲಿಗರ ಜೊತೆ ಹೋಗಲು ಈಶ್ವರಪ್ಪ ನಿರಾಕರಿಸಿದ್ದರು.

ಈ ನಡುವೆ ಯಡಿಯೂರಪ್ಪ ಬೆಂಬಲಿಸಿ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಸಂಸದ ಡಿಬಿ ಚಂದ್ರೇಗೌಡ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸದಾನಂದ ಗೌಡರ ಕಡೆ ಬಾಲಚಂದ್ರ ಜಾರಕಿಹೊಳಿ ಬಣ, ಈಶ್ವರಪ್ಪ, ಆರ್ ಅಶೋಕ್ ಹಾಗೂ ಚಂದ್ರೇಗೌಡರು ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆ.

English summary
Karnataka home minister R Ashoka said CM DV Sadananda Gowda will present the Karnataka Budget 2012. BJP State President KS Eshwarappa also confident about it, will not attend meeting called by BS Yeddyurappa and his supporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X