ವಿದ್ಯಾರ್ಥಿ ಪೃಷ್ಠಕ್ಕೆ ಬಾರಿಸಿದ ಶಿಕ್ಷಕಿಗೆ ಕಪಾಳಮೋಕ್ಷ
ರಾಮನಗರ,
ಮಾ. 17 : ಶಾಲೆಯೊಳಗೆ ಬಲೂನನ್ನು ತಂದಿದ್ದಾನೆ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನ ಪೃಷ್ಠದ ಮೇಲೆ ಬಾಸುಂಡೆ ಬರುವಂತೆ ಹೊಡೆದ ಶಾಲೆಯ ಮಹಿಳಾ ಮುಖ್ಯೋಪಾಧ್ಯಾಯರನ್ನೇ ಸಾರ್ವಜನಿಕರು ಮನಬಂದಂತೆ ಬಾರಿಸಿದ ಘಟನೆ ರಾಮನಗರದಲ್ಲಿ ಶನಿವಾರ ನಡೆದಿದೆ. id="toptextpromo">ಈ
ಘಟನೆ ನಡೆದಿರುವುದು ರಾಮನಗರದಲ್ಲಿ ಹೆಸರುವಾಸಿಯಾಗಿರುವ ಬೆಥಲ್ ಇಂಟರ್ನ್ಯಾಷನಲ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ. ವಿದ್ಯಾರ್ಥಿ 4ನೇ ತರಗತಿಯಲ್ಲಿ ಓದುತ್ತಿರುವ ಆಕಾಶ್. ಆತನ ಪೃಷ್ಠದ : ಮೇಲೆ ಮಾನವೀಯತೆ ಮರೆತು, ದುಷ್ಟ ಶಿಕ್ಷಕಿಯಂತೆ ಬಾರಿಸಿರುವುದು ಶಾಲೆಯ ಮುಖ್ಯೋಪಾಧ್ಯಾಯಿನಿ ರೀಟಾ.ಘಟನೆಯ
ವಿವರ
:
ಆಕಾಶ್
ಶಾಲೆಗೆ
ಬಲೂನನ್ನು
ತಂದಿದ್ದಾನೆ.
ಸಹಪಾಠಿಯೊಬ್ಬಳು
ಕೇಳಿದಳೆಂದು
ಬಲೂನನ್ನು
ಊದುತ್ತಿದ್ದಾಗ
ರೀಟಾ
ಕೈಗೆ
ಸಿಕ್ಕಿಬಿದ್ದಿದ್ದಾನೆ.
ಬಲೂನ್
ಕೊಡಲು
ಆಕಾಶ್
ನಿರಾಕರಿಸಿದ
ಎಂಬ
ಕಾರಣಕ್ಕೆ
ರೀಟಾ
ಮೇಡಂ
ಆಕಾಶ್‌ನನ್ನು
ಕೋಲಿನಿಂದ
ಥಳಿಸಿದ್ದಾರೆ.
ನಂತರ
ಆಕಾಶ್
ಜ್ವರ
ಬಂದು
ಮಲಗಿದ್ದಾನೆ.
ವಿಚಾರಿಸಿದಾಗ
ಪಾಲಕರಿಗೆ
ಘಟನೆಯನ್ನು
ವಿವರಿಸಿದ್ದಾನೆ.
id='are-slot-1'
class='oiad
oi-axt
oiadv'>
id='top-searched-articles'>
ಇದರಿಂದ
ರೊಚ್ಚಿಗೆದ್ದ ಪಾಲಕರು ಮತ್ತು ಸಾರ್ವಜನಿಕರು ಶಾಲೆಗೆ ನುಗ್ಗಿ, ರೀಟಾರನ್ನು ಚೇಂಬರಿನಂದ ಹೊರಗೆಳೆದು, ಕಪಾಳಮೋಕ್ಷ ಮಾಡಿದ್ದಾರೆ. ಆಕೆ ಬಹಿರಂಗವಾಗಿ ಕ್ಷಮೆ ಕೋರಿದರೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದಾಗಿ, ಇಡೀ ಶಾಲೆಯಲ್ಲಿ ಅಹಿತಕರ ವಾತಾವರಣ ಸೃಷ್ಟಿಯಾಗಿದೆ. ರೀಟಾ ವಿರುದ್ಧ ಪೊಲೀಸರಿಗೆ ದೂರನ್ನೂ ನೀಡಲಾಗಿದೆ. [ಶಿಕ್ಷಕರನ್ನು ಥಳಿಸುವುದು ಎಷ್ಟು ಸರಿ?]











Click it and Unblock the Notifications