ಇದು ಶ್ರೀರಾಮುಲು Impact: ಬಿಜೆಪಿಗೆ 28 ಸದಸ್ಯರ ಗುಡ್ ಬೈ

ಪಕ್ಷದ ಸದಸ್ಯರ ಹಠಾತ್ ನಿರ್ಧಾರದಿಂದ ತಬ್ಬಿಬ್ಬಾಗಿರುವ ಬಿಜೆಪಿ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲಾಗದೆ ಕೈಚೆಲ್ಲಿ ಕೂತಿದೆ. ಬಳ್ಳಾರಿ ಪಾಲಿಕೆಯಲ್ಲಿ ಈಗ ಬಹುಪಾಲು ಶ್ರೀರಾಮುಲು ಬೆಂಬಲಿಗರಿಂದಲೇ ತುಂಬಿದೆ. ಈ ಮೂಲಕ ಬಳ್ಳಾರಿಯಲ್ಲೇ ಪಕ್ಷದ ಖಾತೆ ತೆರೆದು ಗೆಲುವಿಗೆ ಮುನ್ನುಡಿ ಬರೆದಿದ್ದಾರೆ.
ಶುಕ್ರವಾರ ( ಮಾ 16) ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಕೆ ಹನುಮಂತಪ್ಪ ಮತ್ತು ಉಪ ಮೇಯರ್ ಆಗಿ ಇಬ್ರಾಹಿಮ್ ಬಾಬು ಆಯ್ಕೆಯಾಗಿದ್ದೇ ತಡ ಬಿಎಸ್ಆರ್ ಪಕ್ಷದ ಬಾವುಟ ರಾರಾಜಿಸಿತು. ರೆಡ್ಡಿ ಸಹೋದರರು, ರಾಮುಲು ಪರ ಘೋಷಣೆ ಕೇಳಿಬಂತು.
ಬಳ್ಳಾರಿ ಪಾಲಿಕೆಯ 35 ಸದಸ್ಯರಲ್ಲಿ 30 ಬಿಜೆಪಿ, 3 ಜೆಡಿಎಸ್ ಮತ್ತು 2 ಬಿಎಸ್ಪಿ ಸದಸ್ಯರಿದ್ದರು.












Click it and Unblock the Notifications