• search

ಸ್ಕೂಟರ್ ಬಿಡೋಕೆ ಬರೋಲ್ಲ, ಬಸ್ ಬಿಡ್ತಾರಾ: ಇಬ್ರಾಹಿಂ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  CM Ibrahim
  ಚಿಕ್ಕಮಗಳೂರು, ಮಾ.16: 'ಸ್ಕೂಟರ್ ಓಡಿಸಲು ಬಾರದವರು, ಲೈಲ್ಯಾಂಡ್ ಬಸ್ ಓಡಿಸು ತ್ತಾರೆಯೇ?' ಎಂದು ಸಾರ್ವಜನಿಕರ ಎದುರು ಪ್ರಶ್ನೆ ಎಸೆದು ನಗುತ್ತಾ ಕೂತರು ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ.

  ಸದಾನಂದಗೌಡ ಅವರು ಮುಖ್ಯಮಂತ್ರಿಯಾದ ಮೇಲೆ ರಾಜ್ಯದ ಪರಿಸ್ಥಿತಿ ಹದಗೆಟ್ಟಿದೆ. ಯಾವುದೇ ಅನುಭವ ಇಲ್ಲದಿರುವುದು ಈ ಪರಿಸ್ಥಿತಿಗೆ ಕಾರಣವೆಂದು ವ್ಯಂಗ್ಯವಾಡಿದರು.

  ಚಾಲನಾ ಪರವಾನಗಿ ಇಲ್ಲದೆಯೇ ವಾಹನ ಚಲಾಯಿಸಲು ಮುಂದಾಗಿರುವ ಸ್ಥಿತಿ ಸದಾನಂದಗೌಡ ಅವರದಾಗಿದೆ. ಸಹೋದ್ಯೋಗಿ ಸಚಿವರುಗಳು ಸಹಕಾರ ನೀಡುತ್ತಿಲ್ಲ. 22 ಖಾತೆಗಳನ್ನು ತನ್ನ ತಲೆ ಮೇಲೆ ಹೊತ್ತುಕೊಂಡು ರಾಜ್ಯ ಸುತ್ತುವಂತಾಗಿದೆ ಎಂದು ಟೀಕಿಸಿದರು.

  ಬರಗಾಲ ಪ್ರವಾಹ ಸಂತ್ರಸ್ತರನ್ನು ಕೇಳಲು ಯಾವುದೇ ಒಬ್ಬ ಮಂತ್ರಿ ಹೋಗಿಲ್ಲ. ಬೈಠಕ್, ಚಿಂತನ-ಮಂಥನ, ಅಭಿನಂದನ ಕಾರ್ಯಕ್ರಮದಲ್ಲೆ ಕಾಲಕಳೆಯುತ್ತಿದ್ದಾರೆ.

  ಈ ಚುನಾವಣೆಯಲ್ಲಿ ಮತ ಕೇಳುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. 'ಬಹುತೇಕ ಮುಖಂಡರು ಜೈಲಿನಲ್ಲಿದ್ದರೆ, ಮತ್ತೆ ಕೆಲವರು ಬೇಲ್ ನಲ್ಲಿದ್ದಾರೆ' ಎಂದು ಕುಟುಕಿದರು.

  ಸಾರ್ವಜನಿಕರ ಮುಂದೆ ನಿಂತು ಮಾಡಿರುವ ಸಾಧನೆ ಕೆಲವರು ಜೈಲಿನಲ್ಲಿ ಹಲವರು ಬೇಲ್‌ನಲ್ಲಿ ಯನ್ನು ಹೇಳಿಕೊಳ್ಳಲು ಅವರಿಗಾಗುತ್ತಿಲ್ಲ. ಬಜೆಟ್‌ನಲ್ಲಿ ಮೀಸಲಿಟ್ಟ ಹಣದಲ್ಲಿ ಶೇ.30 ರಷ್ಟೂ ಕೂಡಾ ಖರ್ಚಾಗಿಲ್ಲ. ಈ ವಿಷಯವನ್ನು ಪ್ರಸ್ತಾಪಿಸಲು ವಿಧಾನಸೌಧದ ಒಳಗೆ ಮತ್ತು ಹೊರಗಡೆ ಅವಕಾಶವಿಲ್ಲದಂತಾಗಿದೆ ಎಂದರು.

  ಮಾತು ಕೇಳದ ಜೆಡಿಎಸ್ : ಜೆ.ಡಿ.ಎಸ್. ಅಭ್ಯರ್ಥಿ ಯನ್ನು ಕಣಕ್ಕಿಳಿಸದೇ ಬೆಂಬಲಿಸುವಂತೆ ದೇವೇಗೌಡ ಅವರನ್ನು ಕೇಳಿಕೊಳ್ಳಲಾಗಿತ್ತು. ಆದರೆ ಆ ಪಕ್ಷದವರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಅವರುಗಳು ಹೆಚ್ಚಾಗಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ಬೀದಿಗೆ ಹೋಗುತ್ತಿದ್ದಾರೆ. ಇದನ್ನು ಗಮನಿಸಿದರೆ ಅಲ್ಪಸಂಖ್ಯಾತರ ಮತಗಳನ್ನು ಒಡೆಯುವ ಲೆಕ್ಕಾಚಾರ ಅವರದಾಗಿದೆ ಎಂದು ಹೇಳಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Udupi Chikmagalur LS By Election 2012: CM Ibrahim campaigns for Congress in Chikmagalur. Ibrahim calls CM Sadananda Gowda as waste candidate and said those who don't know how to drive scooter are given leyland bus to drive.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more