ಉಡುಪಿ ಚುನಾವಣಾ ಪ್ರಚಾರದಿಂದ ಬಹುದೂರ ಉಳಿದುಬಿಟ್ಟ ಯಡ್ಡಿ

B S Yeddyurappa
ಬೆಂಗಳೂರು, ಮಾ 16: ತಮ್ಮ ರಾಜಕೀಯ ವೃತ್ತಿ ಜೀವನದಲ್ಲಿ ಬಹುಷಃ ಇದೇ ಮೊದಲಬಾರಿಗೆ ಮಾಜಿ ಸಿಎಂ ಯಡಿಯೂರಪ್ಪ ಪ್ರಮುಖ ಚುನಾವಣೆಯಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಪ್ರಶ್ತ್ನೆಯಾಗಿರುವ ಉಡುಪಿ ಚಿಕ್ಕಮಗಳೂರು ಉಪಚುನಾವಣೆಯ ಪ್ರಚಾರದಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಬಿಎಸ್ವೈ ಗುರುವಾರ (ಮಾ 15) ತಡರಾತ್ರಿ ಸ್ಪಷ್ಟ ಪಡಿಸಿದ್ದಾರೆ.

ಕ್ಷೇತ್ರದ ಬಹಿರಂಗ ಚುನಾವಣಾ ಬಹಿರಂಗ ಪ್ರಚಾರಕ್ಕೆ ಶುಕ್ರವಾರ (ಮಾ 16) ಕೊನೆಯ ದಿನವಾಗಿದ್ದು, ತಾವು ಕಾರಣಾಂತರದಿಂದ ಪ್ರಚಾರದಲ್ಲಿ ಭಾಗವಹಿಸಲು ಆಗುತ್ತಿಲ್ಲ.ಈ ಹಿಂದೆಯೇ ನನ್ನ ನಿಲುವನ್ನು ಪಕ್ಷದ ನಾಯಕರುಗಳಿಗೆ ತಿಳಿಸಿದ್ದೇನೆ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಹಾಲಿ ಸಿಎಂ ಸದಾನಂದ ಗೌಡರಿಗೆ ಈ ಉಪಚುನಾವಣೆ ಅಗ್ನಿಪರೀಕ್ಷೆಯಾಗಲಿದೆ.

ಬಹಿರಂಗ ಪ್ರಚಾರ ಇಂದು ಅಂತ್ಯ

ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಅದಾದ ನಂತರ ಮನೆ-ಮನೆಗೆ ತೆರಳಿ ಮತಯಾಚನೆ ಶುರುವಾಗಲಿದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಆಯಾ ಪಕ್ಷದ ಅಭ್ಯರ್ಥಿಗಳ ಜತೆ ಸೇರಿ ಮತಬೇಟೆಗೆ ಇಂದು ಸಂಜೆವರೆಗೆ ಅಂತಿಮ ಕಸರತ್ತು ನಡೆಸಲಿದ್ದಾರೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ನಂತರ ಕ್ಷೇತ್ರದ ಹೊರಗಿನ ನಾಯಕರು, ಕಾರ್ಯಕರ್ತರು ಕ್ಷೇತ್ರ ಬಿಟ್ಟು ತೆರಳಬೇಕಾಗಿದೆ.

ಇದೇ ಭಾನುವಾರ ( ಮಾ 18) ಮತದಾನ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಮೂವರು ಅಭ್ಯರ್ಥಿಗಳು ಸೇರಿದಂತೆ ಕಣದಲ್ಲಿ ಒಟ್ಟು 14 ಅಭ್ಯರ್ಥಿಗಳಿದ್ದಾರೆ. ಮಾ.21ಕ್ಕೆ ಚುನಾವಣಾ ಫ‌ಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+