ರಾಜ್ಯಕ್ಕೆ ಸಿಕ್ಕ PPP ಯೋಜನೆಗಳಿಂದ ಏನು ಲಾಭ?

ಕರ್ನಾಟಕದ ಧಾರ್ಮಿಕ, ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕ ಒದಗಿಸುವಂತೆ ಹಲವಾರು ವರ್ಷಗಳಿಂದ ಬೇಡಿಕೆ ಮುಂದಿಟ್ಟರೂ, ಬೇರೆ ರಾಜ್ಯದ ತಾಣಗಳತ್ತ ಮಾತ್ರ ಕೇಂದ್ರ ಸರ್ಕಾರ ಗಮನಹರಿಸಿದೆ. ನಮ್ಮ ಸಂಸದರು ಈ ಬಗ್ಗೆ ಪ್ರಶ್ನಿಸದಿರುವುದು ವಿಪರ್ಯಾಸ.
ಕರ್ನಾಟಕ ಸರ್ಕಾರ ಕೈಗೆ ಸಿಕ್ಕ ಯೋಜನೆಗಳು
* ಬೆಂಗಳೂರು ಹುಬ್ಬಳ್ಳಿ ಮತ್ತು ಶಿವಮೊಗ್ಗ ತಾಳಗುಪ್ಪ
* ಕೊಟ್ಟೂರು ಹುಬ್ಬಳ್ಳಿ ವಯಾ ಹರಪ್ಪನಹಳ್ಳಿ
* ಹಾಸನ ಬೆಂಗಳೂರು ವಯಾ ಶ್ರವಣಬೆಳಗೊಳ
* ಕಡೂರು-ಚಿಕ್ಕಮಗಳೂರು-ಸಕಲೇಶಪುರ
* ಮುನಿರಾಬಾದ್-,ಮಹಬೂಬ್ ನಗರ
* ಗುಲ್ಬರ್ಗಾ-ಬೀದರ್
* ಕೋಲಾರ-ಚಿಕ್ಕಬಳ್ಳಾಪುರ
* ಅರಸೀಕೆರೆ-ಬೀರೂರು-ಪ್ಯಾಚ್ ಡಬ್ಲಿಂಗ್
* ರಾಮನಗರ-ಮೈಸೂರು ಜೊತೆಗೆ ಕೆಂಗೇರಿ-ಮೈಸೂರು ವಿದ್ಯುತೀಕರಣ
* ಬಾಗಲಕೋಟೆ-ಕುಡಚಿ
* ರಾಯದುರ್ಗ-ತುಮಕೂರು ವಯಾ ಕಲ್ಯಾಣದುರ್ಗ
* ತುಮಕೂರು-ಚಿತ್ರದುರ್ಗ-ದಾವಣಗೆರೆ
* ಶಿವಮೊಗ್ಗ-ಹರಿಹರ
* ವೈಟ್ ಫೀಲ್ಡ್-ಕೋಲಾರ
ವಿದ್ಯುತೀಕರಣಕ್ಕೆ ಅನುಮೋದನೆ ಸಿಕ್ಕಿರುವುದು
* ಹೊಸಪೇಟೆ-ಗುಂತಕಲ್ ಮತ್ತು ತೋರಣಗಲ್-ರಂಜಿತ್ ಪುರ
* ಹೊಸಪೇಟೆ-ಗದಗ-ಹುಬ್ಬಳ್ಳಿ
* ಬೆಂಗಳೂರು-ತುಮಕೂರು-ಹುಭ್ಬಳ್ಳಿ-ಲೋಂಡಾ-ವಾಸ್ಕೋ ಡ ಗಾಮ(ಬೀರೂರು-ತಾಳಗುಪ್ಪ)
* ಚಿಕ್ಕಜಾಜೂರು-ಬಳ್ಳಾರಿ
ಈ ಎಲ್ಲಾ ಖಾಸಗಿ ಸಹಭಾಗಿತ್ವದ ಯೋಜನೆಗಳಿಗೆ ಕರ್ನಾಟಕ ಬಂಡವಾಳ ಹೂಡಬೇಕಾಗುತ್ತದೆ. ಕೇಂದ್ರ ಕೂಡಾ ಒಂದಿಷ್ಟು ಅನುದಾನ ನೀಡುತ್ತದೆ. ಆದರೆ, ರಾಜ್ಯ ಬಂಡವಾಳ ಹೂಡಿದ ಮೇಲೂ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವ ಭರವಸೆ ಇಲ್ಲ. ಹಾಕಿದ ದುಡ್ಡು ವಾಪಾಸ್ ಪಡೆಯುವಂತಿಲ್ಲ. ಜೊತೆಗೆ ಯೋಜನೆ ವಿಳಂಬಕ್ಕೆ ಕೇಂದ್ರ ಉತ್ತರಿಸುವುದೂ ಇಲ್ಲ.
'ನೀನು ಕೊಟ್ಟ ಹಾಗೆ ಮಾಡು ನಾನು ಇಸ್ಕೋಳ್ಳೋ ಹಾಗೆ ಮಾಡ್ತೀನಿ' ಎನ್ನುವಂತಿದೆ ಕೇಂದ್ರ ಸರ್ಕಾರದ ಕ್ರಮ. ಇದಕ್ಕೆ ಕಾರಣ ರೈಲ್ವೆ ಇಲಾಖೆ ನಷ್ಟದಲ್ಲಿದೆ. ಅದರಲ್ಲೂ ಕರ್ನಾಟಕ ಗಣಿಗಾರಿಕೆ ಸ್ಥಗಿತಗೊಂಡಿದ್ದು ಭಾರಿ ಹೊಡೆತ ಕೊಟ್ಟಿದೆ. ಹೇಗೆ..ಮುಂದೆ ಓದಿ..












Click it and Unblock the Notifications