ಬಳ್ಳಾರಿ ಗಣಿ ಬಂದ್, ರೈಲ್ವೆ ಇಲಾಖೆಗೆ ಭಾರಿ ನಷ್ಟ

ಸುಪ್ರೀಂಕೋರ್ಟ್ ಆದೇಶದಿಂದ ಬಳ್ಳಾರಿಯಲ್ಲಿ ಗಣಿಗಾರಿಕೆ ರದ್ದತಿಯಿಂದಾಗಿ ರೈಲ್ವೆ ಇಲಾಖೆಯ ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದರು.
ಗಣಿಗಾರಿಕೆ ನಿಲ್ಲಿಸಿರುವುದರಿಂದ ಕರ್ನಾಟಕಕ್ಕೆ ಸುಮಾರು 4000 ಕೋಟಿ ರು ನಷ್ಟ ಹಾಗೂ 1.5 ಲಕ್ಷ ಮಂದಿ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ.
ಕಬ್ಬಿಣ ಉಕ್ಕು ವಲಯದಿಂದ ರೈಲ್ವೇ ಇಲಾಖೆಗೆ ಬರುತ್ತಿದ್ದ ಆದಾಯ ಶೇ.7.1ರಷ್ಟು ಇಳಿಮುಖ ಕಂಡು 5,238 ಕೋಟಿ ರು ಮಾತ್ರ ದಾಖಲಾಗಿದೆ.
35 ಮಿಲಿಯನ್ ಕಬ್ಬಿಣದ ಅದಿರು ಉತ್ಪಾದನೆ ಮಾಡುವ ಬಳ್ಳಾರಿಯಿಂದ ಸುಮಾರು 97 ಮಿಲಿಯನ್ ಟನ್ ನಷ್ಟಿದ ರಫ್ತಿನ ಪ್ರಮಾಣ 50 ಮಿಲಿಯನ್ ಟನ್ ಗಳಿಗೆ ಇಳಿದಿರುವುದು ರೈಲ್ವೆ ಇಲಾಖೆ ಭಾರಿ ಹೊಡೆತ ನೀಡಿದೆ.












Click it and Unblock the Notifications