ಮಹಿಳಾ ಟೆಕ್ಕಿಗಳೇ, 8 ಗಂಟೆ ನಂತರ ಕೆಲ್ಸ ಮಾಡ್ಬೇಡಿ

ಸೋಮವಾರದಿಂದ ಈ ನೀತಿ ಜಾರಿಗೆಗೊಳಿಸಲಾಗಿದ್ದು, ಮಹಿಳೆಯರನ್ನು ರಕ್ಷಿಸಲು ಇದೊಂದೇ ವಿಧಾನ ಎಂದು ಸರಕಾರ ಕೈತೊಳೆದುಕೊಂಡಿದೆ. ಅಂದಹಾಗೆ ರಾಜಧಾನಿಯ ಪಕ್ಕದಲ್ಲೇ ಇರುವ ಗುರಗಾಂವಿನಲ್ಲಿ ಟೆಕ್ಕಿಗಳೇ ಹೆಚ್ಚಾಗಿದ್ದಾರೆ. ಹೀಗಾಗಿ ಭಾರಿ ಮಾಲ್ ಗಳು, ವಾಣಿಜ್ಯ ಸಂಕೀರ್ಣಗಳು ಮತ್ತಿತರ ಸಾಮಾಜಿಕ ತಾಣಗಳು ನಾಯಿಕೊಡೆಯಂತೆ ತಲೆಯೆತ್ತಿವೆ.
ರಾತ್ರಿ 8 ಗಂಟೆಯ ನಂತರವೂ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದರೆ ಅದು ಆಯಾ ಕಂಪನಿ, ಸಂಸ್ಥೆಗಳ ಹಣೆಬರಹ. ಮಹಿಳಾ ಉದ್ಯೋಗಿಗಳ ಜವಾಬ್ದಾರಿ ಅವರದೇ ಎಂದು ಗುರಗಾಂವ್ ಜಿಲ್ಲಾಧಿಕಾರಿ ಪಿಸಿ ಮೀನಾ ಅಧಿಕೃತ ಫರ್ಮಾನು ಹೊರಡಿಸಿದ್ದಾರೆ.
ಇನ್ನೂ ಒಂದು ಹೆಜ್ಜೆ ಹಿಂದಿಟ್ಟಿರುವ ಮೀನಾ, ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿಗಳನ್ನು ಅಳವಡಿಸುವಂತೆಯೂ ಮೀನಾ ದುಂಬಾಲು ಬಿದ್ದಿದ್ದಾರೆ. ಜತೆಗೆ, ರಾತ್ರಿ ನಿರ್ದಿಷ್ಟ ಅವಧಿಯ ನಂತರ ಪಬ್ ಗಳು ತೆರೆದಿದ್ದರೆ ಕರೆಂಟ್ ಕಟ್ ಮಾಡಲಾಗುವುದು ಎಂದೂ ಎಚ್ಚರಿಸಿದ್ದಾರೆ.












Click it and Unblock the Notifications