ಮಣಿಪಾಲ್ ವಿದೇಶಿ ವಿದ್ಯಾರ್ಥಿ ಖಾತೆಗೆ ಕನ್ನ

ಕೀನ್ಯಾ ದೇಶದ ಪ್ರಜೆ ಫಯಾಝ್ ಅಕಿಲ್ ಮುಹಮ್ಮದ್ ಅಲಿ ಎಂಬವರು ಕೆಎಂಸಿ ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಬಿಡಿಎಸ್ ವಿದ್ಯಾಭ್ಯಾಸಕ್ಕಾಗಿ 22,420 ಅಮೆರಿಕನ್ ಡಾಲರ್ ಮತ್ತು 94 ಸಾವಿರ ರೂ. ಭಾರತೀಯ ಹಣವನ್ನು ಪಾವತಿಸಿದ್ದರು.
ಆದರೆ ಆನಂತರದ ದಿನಗಳಲ್ಲಿ ಫಯಾಝ್ ಅಕಿಲ್‌ಗೆ ವಿದ್ಯಾರ್ಥಿ ವೀಸಾ ಸಿಗದ ಹಿನ್ನೆಲೆಯಲ್ಲಿ ಆತ ಪಾವತಿಸಿದ ಶುಲ್ಕವನ್ನು ವಾಪಸ್ಸು ನೀಡುವಂತೆ ಮಣಿಪಾಲ ವಿವಿಯಲ್ಲಿ ವಿನಂತಿಸಿದ್ದ. ಜ.14ರಂದು ಫಯಾಝ್ ಅಕಿಲ್ ಇ-ಮೇಲ್ ಮುಖಾಂತರ ಹಣ ವಾಪಸು ಮಾಡುವಂತೆ ಇಮೇಲ್ ವಿಳಾಸವನ್ನು ನೀಡಿದ್ದನು. ಅದರಂತೆ ಮಣಿಪಾಲ ವಿವಿಯವರು ಆ ಇ-ಮೇಲ್ ವಿಳಾಸಕ್ಕೆ ಹಣ ಕಳುಹಿಸಿದ್ದರು.
ಆದರೆ ಆ ಹಣ ಫಯಾಝ್ ಅಕಿಲ್‌ನ ವಿಳಾಸಕ್ಕೆ ಸಂದಾಯವಾಗದೆ, ಅಪರಿಚಿತ ದುಷ್ಕರ್ಮಿಗಳ ಇ-ಮೇಲ್ ವಿಳಾಸದ ಅಕೌಂಟ್‌ಗೆ ಜಮಾ ಆಗಿದೆ. ಈ ಬಗ್ಗೆ ವಿವಿಯ ಹಣಕಾಸು ವಿಭಾಗದ ಅಧಿಕಾರಿಗಳು ಪರಿಶೀಲಿಸಿದಾಗ ಆ ಹಣ ಸಂದಾಯ ವಾಗಿರುವುದು ಮುಂಬೈನ ನಿಲೇಶ್ ಸಿಂಗ್ ಎಂಬವರ ಐಸಿಐಸಿಐ ಅಕೌಂಟ್‌ಗೆ ಎಂಬುದು ತಿಳಿದು ಬಂದಿದೆ.
ಆದರೆ ಇದು ನಕಲಿಯಾಗಿದ್ದು, ದುಷ್ಕರ್ಮಿ ಗಳು ಇ-ಮೇಲ್‌ನ್ನು ಹ್ಯಾಕ್ ಮಾಡಿ ಈ ಹಣವನ್ನು ಮೋಸದಿಂದ ಲಪಟಾಯಿಸಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.












Click it and Unblock the Notifications