ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ಅಕ್ರಮ ಆಸ್ತಿ, 6 ಸಚಿವರಿಗೆ ಸುಪ್ರೀಂ ನೋಟಿಸ್

By Mahesh
|
Google Oneindia Kannada News

YS Jagan Mohan Reddy
ನವದೆಹಲಿ, ಮಾ.13: ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ಪಕ್ಷದ ವಾರ್ಷಿಕ ಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ, ಜಗನ್ ಅವರಿಗೆ ಸಹಕರಿಸಿದ ಸಚಿವರು ಮತ್ತು ಅಧಿಕಾರಿಗಳು ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿಂದ ನೋಟಿಸ್ ಪಡೆದಿದ್ದಾರೆ.

ಜಗನ್ ಅಕ್ರಮ ಆಸ್ತಿ ಪ್ರಕರಣದಲ್ಲಿ 6 ಜನ ಸಚಿವರು ಹಾಗೂ 8 ಐಎಎಸ್ ಅಧಿಕಾರಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ, ಸಿಬಿಐ ಕ್ರಮ ಕೈಗೊಂಡಿಲ್ಲ ಎಂದು ವಕೀಲರೊಬ್ಬರು ಆರೋಪಿಸಿದ್ದರು.

ವಕೀಲ ಸುಧಾಕರ ರೆಡ್ಡಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಬಲವೀರ್ ಭಂಡಾರಿ ನ್ಯಾಯಪೀಠ, ಸೋಮವಾರ ಆಂಧ್ರಪ್ರದೇಶ ಸರ್ಕಾರದ ಆರು ಜನ ಸಚಿವರು ಸೇರಿದಂತೆ, 8 ಜನ ಐಎಎಸ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಇದಕ್ಕೂ ಮುನ್ನ ಜಗನ್ ಮೇಲೆ ಸಿಬಿಐ ದಾಳಿ ಕಂಡು, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜಗನ್ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವ ದೊಡ್ಡ ದೊಡ್ಡ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದರು.(ಪಿಟಿಐ)

English summary
The Supreme Court on Monday(Mar.12) issued notices to six Andhra Pradesh ministers and eight IAS officers on a plea alleging that the CBI was not proceeding against them despite having sufficient evidence that they helped former Congress leader Y Jagan Mohan Reddy accumulate massive illegal assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X