LS ಚುನಾವಣೆ ಮುಗಿಯುವ ತನಕ ನಕ್ಸಲ್ ಬೇಟೆ

ಮಲವಂತಿಗೆ ಪರಿಸರದಲ್ಲಿ ನಡೆಯುತ್ತಿದ್ದ ನಕ್ಸಲ್ ವಿರುದ್ಧದ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಲಾಗಿದೆ. ಕೊಲ್ಲಿ, ಕುತ್ಲೂರು ಪರಿಸರದಲ್ಲಿ ನಕ್ಸಲ್ ನಿಗ್ರಹ ದಳದ ಪೊಲೀಸರೇ ತುಂಬಿದ್ದಾರೆ.
ಉರ್ದ್ಯಾರ ದಲ್ಲಿ ನಕ್ಸಲೀಯರಿಗೆ ಸ್ಥಳೀಯರ ಸಹಕಾರ ಸಿಕ್ಕಿರುವ ಶಂಕೆ ವ್ಯಕ್ತವಾಗಿದ್ದು, ಅನುಮಾನ ಬಂದ ಕೆಲವರನ್ನು ಪೊಲೀಸರು ಪ್ರಶ್ನಿಸಿದ್ದಾರೆ.
ಜನತೆಗೆ ಭೀತಿ: ಘಟನೆ ನಡೆದ ಪರಿಸರದ ಮನೆಗಳಿಗೆ ಇಂದು ಸ್ಥಳೀಯ ಪೊಲೀಸರು ತೆರಳಿ ಮಾಹಿತಿ ಕಲೆ ಹಾಕುವ ಕಾರ್ಯ ಮಾಡಿದ್ದಾರೆ. ಭಯಭೀತ ಸ್ಥಳೀಯರು ಯಾವುದೇ ಮಾಹಿತಿ ನೀಡಲು ಹಿಂಜರಿಯುತ್ತಿರುವುದಾಗಿ ತಿಳಿದುಬಂದಿದೆ.
ನಕ್ಸಲರಿಂದ ವಶಪಡಿಸಿಕೊಂಡಿರುವ ಅಕ್ಕಿ ಚೀಲಗಳಲ್ಲಿ ಸ್ಥಳೀಯ ಕೆಲವು ಅಂಗಡಿಗಳ ಹೆಸರುಗಳಿದ್ದು, ಈ ನಿಟ್ಟಿನಲ್ಲೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳೀಯರು ಅರಣ್ಯಕ್ಕೆ ಹೋಗಲು ಹಿಂಜರಿಯುವಂತಾಗಿದೆ. ಅರಣ್ಯದೊಳಕ್ಕೆ ಪ್ರವೇಶಿಸದಂತೆ ಪೊಲೀಸರು ಸ್ಥಳೀಯರಿಗೆ ಸೂಚಸಿದ್ದಾರೆ.
ಕಳೆದೊಂದು ವಾರದಿಂದ ಇಲ್ಲಿನ ಕಾಡಿನಲ್ಲಿ ಆಂಧ್ರಪ್ರದೇಶ, ತಮಿಳುನಾಡು ಮುಂತಾದ ಕಡೆಯಿಂದ ಬಂದ ನಕ್ಸಲರು ಹಾಗೂ ಸ್ಥಳೀಯ ನಕ್ಸಲ್ ಪಡೆ ಜೊತೆ ಮಹತ್ವದ ಮಾತುಕತೆ ನಡೆಸಿದೆ ಎಂಬ ಸುದ್ದಿ ಇದೆ. ಆದರೆ, ನಕ್ಸಲ್ ನಿಗ್ರಹ ಪಡೆಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ.












Click it and Unblock the Notifications