ನೀಲಿ ಚಿತ್ರ : ಪತ್ರಕರ್ತರನ್ನು ಬೆಂಬಲಿಸಿದ ನ್ಯಾ. ಕಾಟ್ಜು
ನವದೆಹಲಿ,
ಮಾ. 12 : ಅಶ್ಲೀಲ ವಿಡಿಯೋ ತುಣುಕನ್ನು ವಿಧಾನಸಭೆಯಲ್ಲಿ ಶಾಸಕರು ನೋಡುತ್ತಿದ್ದುದನ್ನು ಚಿತ್ರೀಕರಿಸಿದ ಮಾಧ್ಯಮದವರ ವೃತ್ತಿಪರತೆಯನ್ನು ಹೊಗಳುವ ಬದಲು, ಅವರ ವಿರುದ್ಧ ಕ್ರಮ ಜರುಗಿಸಲು ಯತ್ನಿಸಲಾಗುತ್ತಿದೆ ಎಂದು ಪ್ರೆಸ್ ಕೌನ್ಸಿಲ್ ಚೇರ್ಮನ್ ಆಗಿರುವ ನ್ಯಾ. ಮಾರ್ಕಂಡೇಯ ಕಾಟ್ಜು ಅವರು, ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. id="toptextpromo">ಸೋಮವಾರ
ಕರ್ನಾಟಕದ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ, ನೀಲಿ ಚಿತ್ರದ ಘಟನೆಯನ್ನು ವರದಿ ಮಾಡಿದ ಪತ್ರಕರ್ತರನ್ನು ಬೆಂಬಲಿಸಿದ್ದಾರೆ. ಅಶ್ಲೀಲ ಚಿತ್ರ ನೋಡಿದ ಶಾಸಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಪತ್ರಕರ್ತರ ವಿರುದ್ಧ ನಡೆಸುತ್ತಿರುವ ತನಿಖೆಯನ್ನು ಕೂಡಲೆ ಕೈಬಿಡಬೇಕೆಂದು ಅವರು ಬೋಪಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇಂಥ
ತನಿಖೆಯಿಂದಾಗಿ, ಭಾರತದ ಸಂವಿಧಾನದಲ್ಲಿ ಪತ್ರಕರ್ತರಿಗೆ ನೀಡಲಾಗಿರುವ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಕಸಿದಂತಾಗುತ್ತದೆ. ಈ ಘಟನೆಯಿಂದಾಗಿ ಶಾಸಕರ ಬದಲು ಪತ್ರಕರ್ತರೇ ವಿಧಾನಸಭೆಗೆ ಅಗೌರವ ತೋರಿದಂತೆ ಚಿತ್ರಣ ನೀಡಿದಂತಾಗುತ್ತದೆ ಮತ್ತು ಅವರನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.











Click it and Unblock the Notifications