ರೆಡ್ಡಿ ಕೆಲವೇ ಕ್ಷಣಗಳಲ್ಲಿ ಪರಪ್ಪನ ಅಗ್ರಹಾರ ಕೋರ್ಟಿಗೆ

reddy-to-attend-parappana-agrahara-cbi-court
ಬೆಂಗಳೂರು, ಮಾ.12: ಹತ್ತು ದಿನಗಳ ಹಿಂದೆ ಮಾಜಿ ಸಚಿವ, ಚಂಚಲಗೂಡ ಜೈಲು ವಾಸಿ ಜನಾರ್ದನ ರೆಡ್ಡಿಯನ್ನು ಸಿಟಿ ಸಿವಿಲ್ ಕೋರ್ಟ್ ಮುಂದೆ ಹಾಜರುಪಡಿಸಿದಾಗ ಕೋರ್ಟ್ ಆವರಣ ರಣಾಂಗವಾಗಿದ್ದನ್ನು ಯಾರು ತಾನೇ ಇಷ್ಟು ಬೇಗ ಮರೆಯಲು ಸಾಧ್ಯ. ಕೊನೆಗೆ, ವಕೀಲರು ನಡೆಸಿದ ದುಂಡಾವರ್ತನೆಗೆ ರೆಡ್ಡಿ ಬಂಟರೇ ಕಾರಣ ಎನ್ನುವ ಮಾತೂ ಕೇಳಿಬಂದಿತ್ತು.

ಆದರೆ ಬೆಂಗಳೂರು ಪೊಲೀಸರು ರೆಡ್ಡಿ ವಿಷಯದಲ್ಲಿ ಮತ್ತೆ ಅಂತಹ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಅದಕ್ಕಾಗಿ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಸುನಿಲ್‌ ಕುಮಾರ್‌ ಅವರು ರೆಡ್ಡಿಯನ್ನು ನೇರವಾಗಿ ಪರಪ್ಪನ ಅಗ್ರಹಾರ ಕೋರ್ಟಿಗೆ ಕರೆದುಕೊಂಡು ಹೋಗಲು ಸಜ್ಜಾಗಿ ನಿಂತಿದ್ದಾರೆ.

ಏಕೆಂದರೆ ಒಂದು ದಿನದ ಮಟ್ಟಿಗೆ ಅಲ್ಲಿ ವಿಶೇಷ ಸಿಬಿಐ ಕೋರ್ಟ್‌ಅನ್ನು ಸ್ಥಾಪಿಸಲಾಗಿದೆ. ರೆಡ್ಡಿ ಮತ್ತು ಆತನ ಆಪ್ತ ಅಲಿಖಾನ್ ಜೋಡಿಯ ಸಿಬಿಐ ಬಂಧನ ಅವಧಿ ಸೋಮವಾರಕ್ಕೆ ಮುಗಿಯಲಿದ್ದು, ಅವರನ್ನು ಕೋರ್ಟಿಗೆ ಹಾಜರುಪಡಿಸುವುದು ಅನಿವಾರ್ಯವಾಗಿದೆ.

ಮೂಲಗಳ ಪ್ರಕಾರ, ಸೋಮವಾರ ಜನಾರ್ದನ ರೆಡ್ಡಿಯ ವಿಚಾರಣೆಯು ಜೈಲಿನಲ್ಲಿರುವ 36ನೇ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ಹಾಲ್‌ನಲ್ಲಿ ನಡೆಯಲಿದೆ. ಭದ್ರತೆ ದೃಷ್ಟಿಯಿಂದ ಜೈಲಿನ ಸುತ್ತಮುತ್ತ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿದೆ. ಇದೇ ವೇಳೆ, ರೆಡ್ಡಿಯನ್ನು ಮತ್ತಷ್ಟು ದಿನಗಳ ಕಾಲ ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿ ಸಿಬಿಐ ಪೊಲೀಸರು ಮತ್ತೆ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+