• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪ ಅಭಿನಂದನಾ ಸಮಾರಂಭಕ್ಕೆ ಹುಬ್ಬಳ್ಳಿ ಸಜ್ಜು

By Prasad
|
Yeddyurappa birthday celebration in Hubballi on March 11
ಹುಬ್ಬಳ್ಳಿ, ಮಾ. 10 : ಫೆಬ್ರವರಿ 27ರಂದು 69ನೇ ಹುಟ್ಟುಹಬ್ಬ ಆಚರಿಸಿಕೊಂಡ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಹುಬ್ಬಳ್ಳಿಯಲ್ಲಿ ಮಾ.11ರಂದು ಬೃಹತ್ ಅಭಿನಂದನಾ ಸಮಾರಂಭ ಮತ್ತು ಹುಟ್ಟುಹಬ್ಬ ಆಚರಣೆಯನ್ನು ಅವರ ಕಟ್ಟಾ ಬೆಂಬಲಿಗರು ಆಯೋಜಿಸಿದ್ದಾರೆ.

ನೆಹರೂ ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶದ ನೇತೃತ್ವವನ್ನು, ಇತ್ತೀಚೆಗೆ ಯಡಿಯೂರಪ್ಪನವರಿಗೆ ಮತ್ತೆ ಹತ್ತಿರವಾಗಿರುವ ಹುಬ್ಬಳ್ಳಿ ಗ್ರಾಮಾಂತರ ಶಾಸಕ ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪನವರ ಕಟ್ಟಾ ಬೆಂಬಲಿಗ ಶಿಗ್ಗಾಂವಿ ಶಾಸಕ ಬಸವರಾಜ್ ಬೊಮ್ಮಾಯಿ ಮತ್ತು ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಅವರು ವಹಿಸಿಕೊಂಡಿದ್ದಾರೆ. ಜೊತೆಗೆ ಶೋಭಾ ಕರಂದ್ಲಾಜೆ, ವಿ ಸೋಮಣ್ಣ, ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಮುಂತಾದವರು ಭಾಗವಹಿಸುವ ಸಂಭವನೀಯತೆಯಿದೆ.

ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿರುವ ಯಡಿಯೂರಪ್ಪನವರು ಈ ಸಂದರ್ಭವನ್ನು ತಮ್ಮ ಬಲ ಪ್ರದರ್ಶನ ತೋರಲು ಬಳಸಿಕೊಂಡರೂ ಆಶ್ಚರ್ಯವಿಲ್ಲ. ಈ ಜನ್ಮದಿನೋತ್ಸವದ ಸಂದರ್ಭದಲ್ಲಿ ಯಡಿಯೂರಪ್ಪನವರ ಮೂರುವರ್ಷಗಳ ಆಡಳಿತದ ಬಗ್ಗೆ ಗುಣಗಾನ ಕೂಡ ನಡೆಯಲಿದೆ ಎಂಬ ಮಾತು ಕೇಳಿಬಂದಿದೆ. ಸಮಾರಂಭದ ತಯಾರಿ ಭರದಿಂದ ಸಾಗಿದ್ದು, ರಾಜ್ಯದೆಲ್ಲೆಡೆಯಿಂದ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದೆ.

ಅಕ್ರಮ ಗಣಿಗಾರಿಕೆಯಿಂದ ತಾತ್ಕಾಲಿಕ ಸಮಾಧಾನ ಯಡಿಯೂರಪ್ಪನವರಿಗೆ ದೊರಕಿದ್ದರೂ, ಬಿಜೆಪಿ ಹೈಕಮಾಂಡ್ ಅವರ ಮೇಲೆ ಇನ್ನೂ ಒಲವು ತೋರದಿರುವುದು ಯಡಿಯೂರಪ್ಪನವರಿಗೆ ಭಾರೀ ಇರುಸುಮುರುಸು ತಂದಿದೆ. ಜೊತೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ಕೂಡ ಸದಾನಂದ ಗೌಡರಿಗೆ ಅಭಯಹಸ್ತ ನೀಡಿದ್ದಾರೆ. ತೆರೆಯ ಹಿಂದಿನ ಬೆಳವಣಿಗೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಉತ್ತಮ ಬಜೆಟ್ ಮಂಡನೆಯತ್ತ ಲಕ್ಷ್ಯ ಕೊಡಿ ಎಂದು ಗೌಡರಿಗೆ ಗಡ್ಕರಿ ಕಿವಿಮಾತು ಹೇಳಿದ್ದಾರೆ.

ಬಹಿರಂಗವಾಗಿ ಯಡಿಯೂರಪ್ಪನವರು ತಾವು ಹೈಕಮಾಂಡಿಗೆ ಏನನ್ನೂ ಕೇಳುವುದಿಲ್ಲ, ಮುಖ್ಯಮಂತ್ರಿ ಪದವಿಯನ್ನು ಬಯಸುವುದಿಲ್ಲ ಎಂದು ಹೇಳುತ್ತಿದ್ದರೂ, ತೆರೆಯಹಿಂದೆ ಅವರ ಬೆಂಬಲಿಗರು ತಮ್ಮ ಯತ್ನವನ್ನು ಬಿಟ್ಟಿಲ್ಲ. ಈ ಯತ್ನದ ಭಾಗವಾಗಿ ಕೆಲವರು ಗಡ್ಕರಿಯವರನ್ನು ಭೇಟಿ ಮಾಡಲು ಗೋವಾಗೆ ಕೂಡ ತೆರಳಿದ್ದರು.

ಮುಸುಕಿನ ಗುದ್ದಾಟ : ಮುಖ್ಯಮಂತ್ರಿ ಪಟ್ಟಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಸದಾನಂದ ಗೌಡರ ನಡುವೆ ಮುಸುಕಿನ ಗುದ್ದಾಟ ನಡೆದೇ ಇದೆ. ಹುಬ್ಬಳ್ಳಿಯ ಸಮಾರಂಭಕ್ಕೆ ಆಹ್ವಾನ ನೀಡಲಾಗಿದ್ದರೂ, ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆ ಪ್ರಚಾರ ಕಾರ್ಯವಿದ್ದು, ಸಾಧ್ಯವಾದರೆ ಮಾತ್ರ ಹುಬ್ಬಳ್ಳಿ ಸಮಾರಂಭದಲ್ಲಿ ಭಾಗವಹಿಸುವುದಾಗಿ ಸದಾನಂದ ಗೌಡ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ. ಅಪ್ರತ್ಯಕ್ಷವಾಗಿ ಸದಾನಂದ ಗೌಡರನ್ನು ಬೆಂಬಲಿಸುತ್ತಿರುವ ಈಶ್ವರಪ್ಪ ಕೂಡ ಇದೇ ಮಾತನ್ನು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಯಡಿಯೂರಪ್ಪ ಸುದ್ದಿಗಳುView All

English summary
Hubballi is decked up to witness felicitation program and birthday celebration of former chief minister of Karnataka BS Yeddyurappa on March 11, Sunday. Hubballi rural MLA Jagadish Shettar has taken the initiative. BSY may take this opportunity to show his strength to BJP high command. Sadananda Gowda and KS Eshwarappa may skip attending the function.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more