ಯಡಿಯೂರಪ್ಪ ವಿರುದ್ಧ FIR ರದ್ದು : ತೀರ್ಪಲ್ಲೇನಿದೆ?

* ಲೋಕಾಯುಕ್ತರು ವರದಿ ಸಲ್ಲಿಸುವ ಮುನ್ನ ಯಡಿಯೂರಪ್ಪ ಅವರಿಗೆ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಒಂದು ಪ್ರತಿ ನೀಡಿ ಅವರ ಉತ್ತರಗಳನ್ನು ಪಡೆದುಕೊಂಡಿಲ್ಲ.
* ಆರೋಪಕ್ಕೆ ಪ್ರತಿಯಾಗಿ ಆರೋಪಿಯ ವಿವರಗಳನ್ನು ಆಲಿಸುವ ಅವಕಾಶವನ್ನೇ ಲೋಕಾಯುಕ್ತರು ನೀಡಿಲ್ಲ. ಹೀಗಾಗಿ ತನಿಖೆ ಪೂರ್ತಿಗೊಂಡಂತಾಗುವುದಿಲ್ಲ.
* ಯಡಿಯೂರಪ್ಪನವರು ಆರೋಪಿಸಿದಂತೆ ಕೆಲ ಗಣಿಗಾರಿಕೆ ಸಂಸ್ಥೆಯಿಂದ ಪಡೆದರೆನ್ನಲಾದ ಹಣದ ಬಗ್ಗೆ ಲೋಕಾಯುಕ್ತರಿಗೆ ಸಂಶಯವಿದೆ.
* ಲೋಕಾಯುಕ್ತ ಅರೆನ್ಯಾಯಾಂಗ ಅಧಿಕಾರಿಯಾದ್ದರಿಂದ ವರದಿಯಲ್ಲಿ ನಿಖರವಾದ ಕಾರಣಗಳನ್ನು ನೀಡಬೇಕಾಗಿತ್ತು. ಆದರೆ, ಲೋಕಾಯುಕ್ತರು ಆರೋಪಿಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವಾಗ ನಿಖರವಾದ ಕಾರಣಗಳನ್ನೇ ನೀಡಿಲ್ಲ.
* ಯಡಿಯೂರಪ್ಪನವರಿಗೆ ಅವಕಾಶವನ್ನೇ ನೀಡದೆ ಲೋಕಾಯುಕ್ತ ಸಂಸ್ಥೆ ಸ್ವಾಭಾವಿಕ ನ್ಯಾಯವನ್ನು ಸಾರಾಸಗಟಾಗಿ ಗಾಳಿಗೆ ತೂರಿದೆ.
* ಭ್ರಷ್ಟ ಮನಸ್ಸು ಅಂದರೆ ಏನು? ಮತದಾರರಿಗೆ ಟಿವಿ, ಫ್ರಿಜ್ ನೀಡುವುದು ಭ್ರಷ್ಟಾಚಾರವೆ? ರೆಪ್ರೆಸೆಂಟೇಷನ್ ಆಫ್ ಪೀಪಲ್ಸ್ ಆಕ್ಟ್ 1950 ತಿದ್ದುಪಡಿ ಮಾಡಲು ಇದು ಸಕಾಲ.
* ಮುಖ್ಯಮಂತ್ರಿ ಪದವಿ ತ್ಯಜಿಸಬೇಕೆಂದು ಲೋಕಾಯುಕ್ತ ಹೇಳಿಲ್ಲವಾದ್ದರಿಂದ ಅವರನ್ನು ಆಲಿಸುವ ಪ್ರಮೇಯವೇ ಇಲ್ಲ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ.
* ಯಾವುದೇ ಕಂಪನಿಗಳಿಗೆ ಯಡಿಯೂರಪ್ಪ ಔದಾರ್ಯ ತೋರಿದ್ದಾರೆನ್ನುವುದಕ್ಕೆ ಯಾವುದೇ ದಾಖಲೆಗಳನ್ನು ಸಲ್ಲಿಸಲಾಗಿಲ್ಲ. ಗಣಿಗಾರಿಕೆ ಕಂಪನಿಗಳಿಗೆ ಅನುಮತಿ ನೀಡಿದಾಗ ಆರೋಪಿ ಗಣಿ ಮಂತ್ರಿ ಅಥವಾ ಮುಖ್ಯಮಂತ್ರಿ ಕೂಡ ಆಗಿರಲಿಲ್ಲ.
* ಮುಖ್ಯಮಂತ್ರಿ ಸ್ಥಾನ ಶಾಶ್ವತವಲ್ಲ, ಆದರೆ ಗೌರವವೆಂಬುದು ಯಾವತ್ತಿಗೂ ಶಾಶ್ವತ. ಯಡಿಯೂರಪ್ಪ ಅವರ ಮೇಲೆ ಆರೋಪ ಹೊರಿಸಿ ಅವರ ಗೌರವಕ್ಕೆ ಚ್ಯುತಿ ತರಲಾಗಿದೆ.












Click it and Unblock the Notifications