ಸಂಸತ್ತಿನಲ್ಲಿ ಮಹಿಳೆ ಮಿನಿಸ್ಕರ್ಟ್ ಹಾಕುವಂತಿಲ್ಲ

ಈ ರೀತಿ ಕಾನೂನು, ಸ್ತೀ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ. ಮಹಿಳೆಯರು ಸರಿಯಾದ ಬಟ್ಟೆ ಧರಿಸಿದರೂ ಶೋಷಣೆ ನಿಲ್ಲುವುದಿಲ್ಲ. ಮೊದಲು ಪುರುಷರನ್ನು ಬದಲಾಯಿಸಿ ನಂತರ ಸ್ತ್ರೀಯರನ್ನು ನಿರ್ಬಂಧಿಸಿ ಎಂದು ಮಹಿಳಾ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಇತ್ತೀಚೆಗೆ ಅತ್ಯಾಚಾರ ಹಾಗೂ ಅನೈತಿಕ ಚಟುವಟಿಕೆಗಳ ಪ್ರಕರಣಗಳು ನಡೆದಿದೆ.ಮಹಿಳೆಯರು ಸರಿಯಾದ ಬಟ್ಟೆ ಧರಿಸಿದರೆ ಇದು ತಪ್ಪುತ್ತದೆ ಹೀಗಾಗುತ್ತಿದೆ ಎಂದು ಪ್ರತಿನಿಧಿ ಸದನದ ಸ್ಪೀಕರ್ ಮರ್ಝುಕಿ ಅಲಿ ವಾದಿಸುತ್ತಿದ್ದಾರೆ.
ಮಹಿಳೆಯರು ಧರಿಸುವ ಆಶ್ಲೀಲ ಬಟ್ಟೆಗಳು ಪುರುಷರನ್ನು ಕೆರಳಿಸುತ್ತವೆ. ಹಾಗಾಗಿ ಅದನ್ನು ನಿಲ್ಲಿಸಬೇಕಾಗಿದೆ. ಪುರುಷರನ್ನು ಉದ್ರೇಕಿಸಿದರೆ ಅನಾಹುತವಾಗುತ್ತೆ ಎಂಬುದು ನಿಮಗೂ ಗೊತ್ತು ಎಂದು ಅಲಿ ಹೇಳಿದ್ದಾರೆ. ಈ ಕಾನೂನು ಪರ ವಿರೋಧ ವಾದಗಳು ಇನ್ನೂ ಜಾರಿಯಲ್ಲಿದ್ದು, ವಿಧೇಯಕ ಇನ್ನೂ ಜಾರಿಗೊಳ್ಳಬೇಕಿದೆ.












Click it and Unblock the Notifications