ದಯವಿಟ್ಟು, ಪೊಲೀಸರನ್ನು ವಕೀಲರಿಂದ ರಕ್ಷಿಸಿರಿ

ವಕೀಲರು ನಡೆಸಿದ ಪುಂಡಾಟಿಕೆಯಲ್ಲಿ ಅನೇಕ ಪೊಲೀಸರು ಗಾಯಗೊಂಡಿದ್ದರು. ರಕ್ಷಣೆ ನೀಡುವ ಪೊಲೀಸರಿಗೆ ರಕ್ಷಣೆ ಇಲ್ಲದ್ದಂತಾಗಿದ್ದರಿಂದ ಭೀತಿಗೊಂಡ ಪೊಲೀಸರ ಕುಟುಂಬದವರು ನಗರದ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು.
ಕೆಲ ನಾಗರೀಕ ಸಮಿತಿಗಳು ಕೂಡಾ ಪೊಲೀಸ್ ಕುಟುಂಬ ನಡೆಸಿದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಪೊಲೀಸರ ಕುಟುಂಬಕ್ಕೂ ರಕ್ಷಣೆ ಅಗತ್ಯವಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಪೊಲೀಸ್ ಪೇದೆಯೊಬ್ಬರ ಮಗಳು ಆಗ್ರಹಿಸಿದು.
ಈ ಹಿಂದೆ ..ವೀರಪ್ಪನ್ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಕೆಎಸ್ ಆರ್ ಪಿ ತಂಡಕ್ಕೆ ಸರಿಯಾದ ಸೌಲಭ್ಯ ಸಿಗದೇ ಅವರ ಕುಟುಂಬದವರು ಪರದಾಡುವಂತಾಗಿತ್ತು.ಆಗ ಪೊಲೀಸರ ಕುಟುಂದವರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹದು.
ಮಾಧ್ಯಮವರ ಮೇಲೆ ಹಲ್ಲೆ ಎಂಬುದು ಹೈಲೇಟ್ ಆಗುತ್ತಿದೆ. ಪೊಲೀಸರಿಗೆ ಅನ್ಯಾಯವಾಗುತ್ತಿದೆ ಎಂದು ಪೊಲೀಸರ ಪರ ಸಂಘಟನೆಗಳು ದನಿ ಎತ್ತಿದೆ.












Click it and Unblock the Notifications