ಸಿಬಿಐ ಕುಣಿಕೆಯಿಂದ ಯಡಿಯೂರಪ್ಪ ಬಚಾವ್ ಅಸಾಧ್ಯ

ಜಿಂದಾಲ್ ಹಾಗೂ ಅದಾನಿ ಕಂಪನಿ ಮೇಲೆ ವರದಿ ನೀಡಲು ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಸಿಬಿಐ ತನಿಖೆಗೆ ದಾರಿ ಎಡೆಮಾಡಿಕೊಡುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.
ಸಿಇಸಿ ಶಿಫಾರಸ್ಸು ಮುಖ್ಯ: ಅಕ್ರಮ ಗಣಿಗಾರಿಕೆಯ ವಿಚಾರದಲ್ಲಿ ಸುಪ್ರೀಂಕೋರ್ಟ್ ಸಿಇಸಿ ಶಿಫಾರಸುಗಳನ್ನು ನಿರಾಕರಿಸಲಾಗುವುದಿಲ್ಲವಾದ್ದರಿಂದ ಯಡ್ಡಿ ಕುಟುಂಬದ ಪ್ರೇರಣಾ ಟ್ರಸ್ಟ್ ಜಿಂದಾಲ್ ಕಂಪನಿಯಿಂದ 20 ಪ್ಲಸ್ ಕೋಟಿ ಪಡೆದಿರುವ ಪ್ರಕರಣ ಹೊಸ ತಿರುವು ಪಡೆಯಲಿದೆ.
ಹಣ ಪಡೆದಿರುವುದನ್ನು ಸ್ವತಃ ಯಡಿಯೂರಪ್ಪ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಅದು ನನ್ನ ಮಕ್ಕಳ ವ್ಯವಹಾರ ನನಗೂ ಅವರಿಗೂ ಸಂಬಂಧ ಕಡೆದು ಹೋಗಿ ಸುಮಾರು ವರ್ಷ ಆಯಿತು ಎಂದು ಜಾಣತನ ಉತ್ತರ ನೀಡಿದ್ದಾರೆ.
ಈ ಮಧ್ಯೆ ಕರ್ನಾಟಕ ಹೈಕೋರ್ಟ್ ಯಡಿಯೂರಪ್ಪ ಅವರಿಗೆ ಬುಧವಾರ ಕ್ಲೀನ್ ಚಿಟ್ ನೀಡಿದೆ. ಗಣಿಗಾರಿಕೆ ಸಂಬಂಧಿಸಿದ ಉಳಿದ ಪ್ರಕರಣಗಳಲ್ಲೂ ಯಡಿಯೂರಪ್ಪ ಅವರಿಗೆ ಖುಲಾಸೆ ಆಗಲಿದೆ ಎಂದು ಯಡಿಯೂರಪ್ಪ ಪರ ವಕೀಲ ಸಂದೀಪ್ ಪಾಟೀಲ್ ಹೇಳಿದ್ದಾರೆ.












Click it and Unblock the Notifications