ಯಾರ್ ಹೇಳಿದ್ದು? ಲಾಡೆನ್ ಶವ ಸಮುದ್ರಕ್ಕೆ ಎಸೆದಿಲ್ಲ

wikileaks-laden-body-moved-to-us-not-burried-sea
ವಾಷಿಂಗ್ಟನ್, ಮಾ.7: ಮೊನ್ನೆಯಷ್ಟೇ ಅಗ್ರ ಉಗ್ರ ಒಸಾಮಾ ಬಿನ್ ಲಾಡೆನ್ ಡೆನ್ ಅನ್ನು ಪುಡಿಪುಡಿ ಮಾಡಿ ಪೀಡೆ ತೊಲಗಿತು ಅಂದ್ಕೊಂಡಿದ್ದವರಿಗೆ ಅಮೆರಿಕ ಅತ್ಯಂತ ಗೌಪ್ಯವಾಗಿಟ್ಟಿದ್ದ ಸುದ್ದಿಯೊಂದು ಇದೀಗ ತಾನೆ ಬಹಿರಂಗವಾಗಿದೆ.

Wikileaks ಎಂಬ ರಹಸ್ಯಭೇದಕ ವೆಬ್ ದುನಿಯಾ ಪ್ರಕಾರ ಲಾಡೆನ್ ದೇಹವನ್ನು ಸಮುದ್ರಕ್ಕೆ ಎಸೆದಿಲ್ಲ. ಬದಲಿಗೆ ಅತ್ಯಂತ ಜತನದಿಂದ ಅವನ ದೇಹವನ್ನು ಅಮೆರಿಕ ತನ್ನ ವಿಮಾನದಲ್ಲಿ ಅಮೆರಿಕಕ್ಕೆ ಹೊತ್ಕೊಂಡು ಹೋಯಿತು.

ಹೀಗಂತ Wikileaks ಖಬರಸ್ತಾನದ ಕಬರ್ ನೀಡಿದೆ. ಇದಕ್ಕೆ ಆಧಾರ ಸ್ಟ್ರಾಟಫೋರ್ ಬೇಹುಗಾರಿಕೆ ಸಂಸ್ಥೆಯ ಉಪಾಧ್ಯಕ್ಷ ಫ್ರೆಡ್ ಬರ್ಟನ್ ಅವರ ಸ್ಖಲಿತ ಇಮೇಲ್. ಇಮೇಲ್ ವಿವರ ಹೀಗಿದೆ: ಒಸಾಮಾನ ದೇಹ CIA ವಿಮಾನದಲ್ಲಿ ಡೆಲಾವೇರಿನ ಡೋವರ್ ನತ್ತ ಸಾಗುತ್ತಿದೆ. ಅಲ್ಲಿಂದ ಮುಂದಕ್ಕೆ ಮೇರಿಲ್ಯಾಂಡಿನ ಬೆಥಸ್ಡಾದಲ್ಲಿರುವ ಸೇನಾಪಡೆಯ ವೈದ್ಯಕೀಯ ವಿಜ್ಞಾನ ಕೇಂದ್ರಕ್ಕೆ ಕೊಂಡೊಯ್ಯಲಾಗುವುದು' ಎಂದು ಇಮೇಲ್ ನಲ್ಲಿ ಲಾಡೆನ್ ದೇಹ ಸರಿದಾಡುತ್ತದೆ.

2011ರ ಮೇ 2 ರಂದು ನಡುರಾತ್ರಿ ಒಸಾಮಾನ ದೇಹವನ್ನು ಛಿದ್ರಗೊಳಿಸಿದ ಅಮೆರಿಕ, ಅವನ ದೇಹವನ್ನು ಸಮುದ್ರಕ್ಕೆ ಎಸೆಯಲಾಯಿತು ಎಂದು (ಸುಳ್ಳು) ಹೇಳಿತ್ತು. ಅಂದರೆ ಖಬರಸ್ತಾನದಲ್ಲಿ ಅವನ ಹೆಣ ದಫನ್ ಮಾಡಿದರೆ ಅದು ಸ್ಮಾರಕವಾಗುವ ಅಪಾಯವಿದೆ ಎಂಬ ಆತಂಕದಿಂದಾಗಿ ಸಮುದ್ರಕ್ಕೆ ಎಸೆಯಲಾಯಿತು ಎಂದು ಕತೆ ಕಟ್ಟಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+