ಅಕ್ರಮ ಗಣಿಗಾರಿಕೆ: ಲೋಕಾಯುಕ್ತ ವರದಿ ಗೋತಾ

ಇದು ನ್ಯಾ. ಸಂತೋಷ್ ಹೆಗ್ಡೆಗೆ ಅಪಮಾನವೂ ಆಗುವ ಲಕ್ಷಣಗಳಿವೆ. ನ್ಯಾ. ಸಂತೋಷ್ ಹೆಗ್ಡೆ ಯಾರನ್ನು ಗುರಿಯಾಗಿಸಿಕೊಂಡು ಅಕ್ರಮ ಗಣಿಗಾರಿಕೆ ವರದಿ ಸಲ್ಲಿಸಿದ್ದರು ಅಂತ ಹೇಳಲಾಗುತ್ತಿತ್ತೋ ಅದೇ ವ್ಯಕ್ತಿ ಕಾನೂನುರೀತ್ಯವೇ ಅಕ್ರಮ ಗಣಿಗಾರಿಕೆಯಲ್ಲಿ ತನ್ನ ಪಾತ್ರವೇನೂ ಇಲ್ಲ ಅಂತ ಸರ್ಟಿಫಿಕೇಟ್ ತಂದಿದ್ದಾರೆ.
ಅಲ್ಲಿಗೆ ಯಾವ ಬಿಜೆಪಿ ಸರಕಾರ ನ್ಯಾ. ಹೆಗ್ಡೆ ಸಲ್ಲಿಸಿದ್ದ ಅಕ್ರಮ ಗಣಿಗಾರಿಕೆ ವರದಿಯನ್ನು ತಿರಸ್ಕರಿಸಲು ಏನೆಲ್ಲ ಕಸರತ್ತು ಮಾಡುತ್ತಿತ್ತೋ ಅದಕ್ಕೆ ಈಗ ಹೊಸ ಆಯಾಮ ಸಿಕ್ಕಿದಂತಾಗಿದೆ. ಈ ಹಿಂದೆಯೂ ಒಂದೆರಡು ಪಿಳ್ಳೆ ನೆವಗಳನ್ನು ಎತ್ತಿ ತೋರಿಸಿತ್ತು. ಆದರೆ ಇದೀಗ ಉಚ್ಛ ನ್ಯಾಯಾಲಯವೇ ಅಕ್ರಮ ನಡೆದಿಲ್ಲ ಅಂತ ಹೇಳುತ್ತಿದೆ. ಇದರಿಂದ ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿ ಸಿಕ್ಕಂತಾಗಿದೆ. ಇದನ್ನೇ ಆಸರೆಯಾಗಿಸಿಕೊಂಡು, ಆಧಾರವಾಗಿಸಿಕೊಂಡು ಇಡೀ ವರದಿಯನ್ನು cold storage ನಲ್ಲಿಡುವ ಎಲ್ಲ ಸಾಧ್ಯತೆಗಳೂ ಇವೆ.
ಇರಬಹುದು. ಕೇವಲ ಯಡಿಯೂರಪ್ಪ ಒಬ್ಬರನ್ನು ಆರೋಪ ಮುಕ್ತಗೊಳಿಸಿರಬಹುದು. ಅದರಿಂದ ಇಡೀ ವರದಿಯನ್ನೇ ತಿರಸ್ಕರಿಸಲು ಸಾಧ್ಯವಿಲ್ಲ ಅನ್ನಬಹುದು. ಆದರೆ ನ್ಯಾ. ಹೆಗ್ಡೆಯವರ ಶ್ರಮವನ್ನೆಲ್ಲ ಹೊಳೆಯಲ್ಲಿ ಹಿಂಡಲು ರಾಜಕಾರಣಿಗಳು ತುದಿಗಾಲಲ್ಲಿ ನಿಂತಿದ್ದಾರೆ. very sorry, justice Hegde.












Click it and Unblock the Notifications