ಇನ್ಫೋಸಿಸ್ ನಿಂದ 14000 ಮಂದಿ ನೇಮಕಾತಿ

ಸುಮಾರು 100 ಕೋಟಿ ರು ಬಂಡವಾಳ ಹೂಡಿಕೆ ಮಾಡಲಿರುವ ಇನ್ಫೋಸಿಸ್, ಸುಮಾರು 14,000 ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.
ಬೆಂಗಳೂರು ಮೂಲದ ಐಟಿ ಸಂಸ್ಥೆ ಇನ್ಫೋಸಿಸ್ ಹಾಗೂ ಮಹಾರಾಷ್ಟ್ರ ವಿಮಾನಯಾನ ಅಭಿವೃದ್ಧಿ ಸಂಸ್ಥೆ(MADC) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಇನ್ಫೋಸಿಸ್ ಬಗ್ಗೆ ವಿಶೇಷ ಕಾಳಜಿ ತೋರಿಸಿದ್ದು, ಬಹು ವಾರ್ಷಿಕ ಯೋಜನೆಗೆ ಸಮ್ಮತಿಸಿದ್ದಾರೆ.
ಮಿಹಾನ್ ನಲ್ಲಿ ಸುಮಾರು 142 ಎಕರೆ ಭೂಮಿ ನೀಡಲಾಗುತ್ತದೆ. ಮೊದಲಿಗೆ ಏರ್ ಕಾರ್ಗೋ ಯೋಜನೆ ಅಭಿವೃದ್ಧಿ ಪಡಿಸಲಾಗುತ್ತದೆ. ಮೂರು ವರ್ಷದೊಳಗೆ ಇನ್ಫೋಸಿಸ್ ತನ್ನ ಘಟಕದ ಕಾರ್ಯಾರಂಭ ಮಾದಲಿದೆ. ಮೊದಲ ಹಂತದ ಐದು ವರ್ಷಗಳಲ್ಲಿ 2 ಸಾವಿರ ಸಾಫ್ಟ್ ವೇರ್ ಉದ್ಯೋಗ ಸೃಷ್ಟಿಯಾಗಲಿದೆ.
ಲಭ್ಯ ಮಾಹಿತಿ ಪ್ರಕಾರ, ಇನ್ಫೋಸಿಸ್ ಸುಮಾರು 415 ಕೋಟಿ ಹೂಡಿಕೆ ಮಾಡಲಿದ್ದು, 14,000 ಐಟಿ ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳಲಿದೆ.












Click it and Unblock the Notifications