ಸಿಬಿಐ ಪರೀಕ್ಷೆಯಲ್ಲಿ ಗಾಲಿ ಜನಾರ್ದನ ರೆಡ್ಡಿ ಫೇಲ್

ಎಎಂಸಿ ಸಂಸ್ಥೆ ಗಣಿ ಅಕ್ರಮದ ಬಗ್ಗೆ ವಿಚಾರಣೆ ಆರಂಭಿಸಿರುವ ಬೆಂಗಳೂರಿನ ಸಿಬಿಐ ಹೆಚ್ಚುವತಿ ಎಸ್ ಪಿ ಎಸ್ ಎಸ್ ಗಿರಿ ಹಾಗೂ ಇನ್ಸ್ ಪೆಕ್ಟರ್ ಟಿವಿ ಜಾಯ್ ಅವರ ನೇತೃತ್ವದ ತಂಡ ಮೊದಲ ದಿನ ರೆಡ್ಡಿಗೆ ನೀಡಿದ 120 ಪ್ಲಸ್ ಪ್ರಶ್ನೆಗಳಿಗೆ ರೆಡ್ಡಿ ಉತ್ತರಿಸಿದ್ದು ಕೇವಲ 28.
ಅದರಲ್ಲೂ ಸರಿಯುತ್ತರ ಇದ್ದದ್ದು 22-25 ಮಾತ್ರ. ಪಾಸಾಗುವಷ್ಟು ಅಂಕ ಗಳಿಸದಿದ್ದರೂ ರೆಡ್ಡಿ ಇಷ್ಟಾದರೂ ಉತ್ತರಿಸಿದ್ನಲ್ಲಪ್ಪ ಎಂದು ಸಿಬಿಐ ಸಮಾಧಾನ ಪಟ್ಟುಕೊಂಡಿದೆ.
ಮೌನ ಮುರಿದ ರೆಡ್ಡಿಯನ್ನು ಹೆಚ್ಚು ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿಸಿ ಹಿಂಸಿಸುವಂತಿಲ್ಲ. ರೆಡ್ಡಿ ಪರ ವಕೀಲರ ಸಮ್ಮುಖದಲ್ಲೇ ವಿಚಾರಣೆ ನಡೆಯುತ್ತಿದೆ. ಸುಮಾರು 20ಕ್ಕೂ ಅಧಿಕ ನಕಲಿ ಕಂಪನಿಗಳು ಅದರ ದಾಖಲೆಗಳ ಆಧಾರದ ಮೇಲೆ ರೆಡ್ಡಿಯನ್ನು ಪ್ರಶ್ನಿಸಲಾಗುತ್ತಿದೆ. ತೆರಿಗೆ ವಂಚನೆ, ಅದಿರು ರಫ್ತು, ಸಾಗಾಣಿಕೆ ಲೆಕ್ಕಾಚಾರ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ.
ಬೆಂಗಳೂರು ಸಿಬಿಐ ವಿಚಾರಣೆ ವ್ಯಾಪ್ತಿ ಕಮ್ಮಿ..? ಹೇಗೆ












Click it and Unblock the Notifications