ಬೆಂಗಳೂರು ಸಿಬಿಐ ಕೈಗೆ ರೆಡ್ದಿ ಜುಟ್ಟು ಸಿಗ್ತಿಲ್ಲ!

ಇದಲ್ಲದೆ, ಲೋಕಾಯುಕ್ತ ವರದಿಯ 25 ಸಾವಿರ ಪುಟಗಳ ದಾಖಲೆಗಳು, ಅದಕ್ಕೆ ಪೂರಕವಾಗಿ, ಅರಣ್ಯ, ವಾಣಿಜ್ಯ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಗಳ ಆಧಾರದ ಮೇಲೆ ರೆಡ್ಡಿಯನ್ನು ಪ್ರಶ್ನಿಸಲಾಗುತ್ತಿದೆ.
ದಿನಕ್ಕೆ ಆರು ಗಂಟೆ ಮಾತ್ರ ವಿಚಾರಣೆ. ಮಾ.12ರ ತನಕ ಇದೇ ರೀತಿ ವಿಚಾರಣೆ ನಡೆಯಲಿದೆ. ಮುಂದಿನ ವಿಚಾರಣೆ ಬಳ್ಳಾರಿಯಲ್ಲಿ ನಡೆಯಲಿದ್ದು, ಅಲ್ಲಿ ರೆಡ್ಡಿಗಿಂತ ಶಿಷ್ಯ ಅಲಿಖಾನ್ ನೀಡುವ ಮಾಹಿತಿ ಪ್ರಮುಖ ಪಾತ್ರ ವಹಿಸಲಿದೆ.
ಬಳ್ಳಾರಿಯಲ್ಲಿ ಗಣಿಗಾರಿಕೆ ನಡೆಸಿದ ಸ್ಥಳ, ಉತ್ಪಾದನೆ ಅಂಕಿ ಅಂಶ, ಅದಿರು ಅಕ್ರಮ ಸಾಗಣಿಕೆ, ಸ್ಥಳೀಯ ಸಣ್ಣ ಸಣ್ಣ ವರ್ತಕರಿಂದ ಪಡೆದ ಹಫ್ತಾ ಸೇರಿದಂತೆ ಎಷ್ಟು ಸಾಧ್ಯವೋ ಅಷ್ಟು ಮಾಹಿತಿ ಹೊರ ಹಾಕಲು ಸಿಬಿಐ ನಿರ್ಧರಿಸಿದೆ.
ಆದರೆ, ರೆಡ್ಡಿ ಮತ್ತೊಮ್ಮೆ ಹೈದರಾಬಾದಿನಲ್ಲಿ ಸಿಬಿಐ ಮುಂದೆ ಮೌನ ತಳೆದಂತೆ ಇಲ್ಲೂ ಮೌನಿಯಾದರೆ ಕಷ್ಟ ಎಂಬ ಅರಿವು ಬೆಂಗಳೂರಿನ ಸಿಬಿಐಗಿದೆ. ಆಗ ಆಲಿ ಖಾನ್ ಮೇಲೆ ಪ್ರಶ್ನೆಗಳ ಮಳೆಗೆರೆಯುವುದಂತೂ ಗ್ಯಾರಂಟಿ.












Click it and Unblock the Notifications