ಕಬ್ಬಡಿ: ಪೂಜಾರಿ ಸಾರಥ್ಯದಲ್ಲಿ ಭಾರತಕ್ಕೆ ವಿಶ್ವಕಪ್

Women's Kabbadi World Cup Championship
ಪಾಟ್ನಾ, ಮಾ.5: ಮಹಿಳೆಯ ವಿಶ್ವಕಪ್ ಕಬಡ್ಡಿ ಫೈನಲ್‌ನಲ್ಲಿ ಕಾರ್ಕಳದ ಮಮತಾ ಪೂಜಾರಿ ನಾಯಕತ್ವದ ಭಾರತ ತಂಡ ಇರಾನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಚೊಚ್ಚಲ ವಿಶ್ವಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಇಲ್ಲಿನ ಪಾಟಲೀಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ(ಫೆ.4) ನಡೆದ ಫೈನಲ್‌ನಲ್ಲಿ ಇರಾನ್ ತಂಡವನ್ನು 25 -19 ಅಂಕಗಳಿಂದ ಮಣಿಸಿದ ಭಾರತ ಪ್ರತಿಷ್ಠಿತ ವಿಶ್ವಚಾಂಪಿಯನ್ ಕಿರೀಟವನ್ನು ಧರಿಸಿತು.

ಪಂದ್ಯದ ಮೊದಲಾರ್ಧದಲ್ಲಿ 19-11 ಅಂತರದಲ್ಲಿ ಮುನ್ನಡೆ ಸಾಧಿಸಿದ್ದ ಭಾರತ ಪಂದ್ಯದ ಕೊನೆ ತನಕವು ಮುನ್ನಡೆಯನ್ನು ಕಾಯ್ದುಕೊಂಡು ವಿಜಯದ ನಗೆ ಬೀರಿತು.

ಫೈನಲ್ ಪಂದ್ಯದ ಬಳಿಕ ನಡೆದ ಸಮಾರಂಭದಲ್ಲಿ ವಿಶ್ವಕಪ್ ಗೆದ್ದ ಭಾರತ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ ಮತ್ತು ಸಹ ಆಟಗಾರ್ತಿಯರಿಗೆ ಬಿಹಾರದ ಉಪ ಮುಖ್ಯ
ಮಂತ್ರಿ ಸುಶೀಲ್ ಕುಮಾರ್ ಮೋದಿ ಟ್ರೋಫಿ ಮತ್ತು ಚಿನ್ನದ ಪದಕಗಳನ್ನು ವಿತರಿಸಿದರು.

ಗ್ರೂಪ್ ಹಂತದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಇಂಡೋನೇಷ್ಯಾವನ್ನು ಬಗ್ಗು ಬಡಿದು ಸೆಮಿಫೈನಲ್ ಪ್ರವೇಶಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+