ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.15 ರಿಂದ ಮಾ.30 ರ ತನಕ II ಪಿಯೂ ಪರೀಕ್ಷೆ

By Mahesh
|
Google Oneindia Kannada News

 2nd PUC 2012 Exam Time Table
ಬೆಂಗಳೂರು, ಮಾ.4: ದ್ವಿತೀಯ ಪಿಯುಸಿ ಪರೀಕ್ಷೆ ಮಾ.15ರಿಂದ 30ರ ವರೆಗೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ಪದವಿ ಪೂರ್ವ ಪರೀಕ್ಷಾ ಮಂಡಳಿ(KBPUE) ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಒಟ್ಟು 923 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 5,96,739 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷಾ ಅಕ್ರಮ ತಡೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಜಾಗೃತದಳ ರಚಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದರು.

ವೇಳಾ ಪಟ್ಟಿ ಹೀಗಿದೆ:

ದಿನಾಂಕ ವಿಷಯ
ಮಾ.15 ಇತಿಹಾಸ
ಮಾ.16 ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್
ಮಾ.17 ರಾಜ್ಯಶಾಸ್ತ್ರ/ ಗಣಿತ(basic)
ಮಾ.19 ಅರ್ಥಶಾಸ್ತ್ರ / ಭೂಗರ್ಭಶಾಸ್ತ್ರ
ಮಾ.20 ಗಣಿತ / ಭೂಗೋಳ ಶಾಸ್ತ್ರ
ಮಾ.21 ಸಮಾಜಶಾಸ್ತ್ರ/ Statistics
ಮಾ.22 ಭೌತಶಾಸ್ತ್ರ / ಶಾಸ್ತ್ರೀಯ ಸಂಗೀತ/ಹಿಂದೂಸ್ತಾನಿ ಸಂಗೀತ/ಮನೋವಿಜ್ಞಾನ
ಮಾ.24 ಎಲೆಕ್ಟ್ರಾನಿಕ್ಸ್ / ಕಂಪ್ಯೂಟಕ್ ವಿಜ್ಞಾನ
ಮಾ.26 ಇಂಗ್ಲೀಷ್
ಮಾ.28 ರಸಾಯನಶಾಸ್ತ್ರ / ಐಚ್ಛಿಕ ಕನ್ನಡ
ಮಾ.29 ಕನ್ನಡ / ತಮಿಳು / ಮಲೆಯಾಳಂ / ಮರಾಠಿ /ಅರೇಬಿಕ್ / ಫ್ರೆಂಚ್
ಮಾ.30 ಹಿಂದಿ / ಉರ್ದು / ತೆಲುಗು / ಸಂಸ್ಕೃತ
English summary
The 2012 Board exam for Karnataka state PUC Exam dates have been announced. The provisional Time-Table has been released. Exam will be held March 15 to March 30 said minister Vishveshwar Hegde Kageri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X