ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿಗೆ ಮಂಗಳೂರಿನಿಂದ ನೇರ ರೈಲು

By Mahesh
|
Google Oneindia Kannada News

Mangalore to Tirupati Train
ಉಡುಪಿ, ಮಾ.4: ಕರಾವಳಿ ಜನರಿಗೆ ಅನುಕೂಲವಾಗುವಂತೆ ಮಂಗಳೂರಿನಿಂದ ತಿರುಪತಿಗೆ ವಾರಕ್ಕೊಮ್ಮೆ ನೇರ ರೈಲು ಪ್ರಯಾಣ ಮಾ.1ರಿಂದ ಆರಂಭಗೊಂಡಿದೆ.

ಪ್ರತಿ ಶನಿವಾರ ರಾತ್ರಿ 10.45ಕ್ಕೆ ಮಂಗಳೂರು ಜಂಕ್ಷನ್‌ನಿಂದ ಸಾತ್ರಾಗಾಚ್‌ ವಿವೇಕ್ ರೈಲು ಹೊರಡಲಿದೆ. ಕಾಸರಗೋಡು, ಕಾಂಞಂಗಾಡ್‌, ಕಣ್ಣೂರು, ಕಲ್ಲಿಕೋಟೆ ಶೋರ್ನೂರು ಜಂಕ್ಷನ್‌, ಪಾಲಕ್ಕಾಡ್‌, ಕೊಯಮತ್ತೂರು ಜಂಕ್ಷನ್‌, ತಿರುಪುರ, ಈರೋಡ್‌, ಸೇಲಮ್‌, ಕಾಟ್ಪಾಡಿ ಜಂಕ್ಷನ್‌, ಚಿತ್ತೂರು ಮಾರ್ಗವಾಗಿ ಭಾನುವಾರ ಮಧ್ಯಾಹ್ನ 2.35ಕ್ಕೆ ತಿರುಪತಿ ತಲುಪಲಿದೆ.

ತಿರುಪತಿಯ ಅನಂತರ ಈ ರೈಲು ಗುಡೂರ್‌ ಜಂಕ್ಷನ್‌, ನೆಲ್ಲೂರು, ಓಂಗೋಲ್‌, ವಿಜಯವಾಡ, ರಾಜಮಂಡ್ರಿ, ವಿಶಾಖಪಟ್ಟಣ, ಶ್ರೀಕಾಕುಳಂ, ಬ್ರಹ್ಮಪುರ, ಭುವನೇಶ್ವರ, ಕಟಕ್‌, ಬಿಲಾಸ್ಪುರ ಸಮೀಪದ ಸಾತ್ರಾಗಾಚ್‌ ಜಂಕ್ಷನ್‌ಗೆ ಸೋಮವಾರ ಸಂಜೆ ತಲುಪಲಿದೆ. ಮಂಗಳೂರಿನಿಂದ ಹೊರಟ ರೈಲು ಕೇರಳ, ತಮಿಳುನಾಡು ಗಡಿ, ಆಂಧ್ರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶದವರೆಗೆ ಹೋಗಲಿದೆ.

ಸಾತ್ರಾಗಾಚ್‌ ಜಂಕ್ಷನ್‌ನಿಂದ ಗುರುವಾರ ಸಂಜೆ 4.05ಕ್ಕೆ ಹೊರಡುವ ರೈಲು ಇದೇ ಮಾರ್ಗವಾಗಿ ತಿರುಪತಿಗೆ ಬರುವಾಗ ಶುಕ್ರವಾರ ಸಂಜೆ 5.10 ಗಂಟೆ ಆಗುತ್ತದೆ. ಶನಿವಾರ ಬೆಳಗ್ಗೆ 9.45ಕ್ಕೆ ರೈಲು ಮಂಗಳೂರು ಸೆಂಟ್ರಲ್‌ಗೆ ತಲುಪುತ್ತದೆ.

'ಇದೇ ಮೊದಲ ಬಾರಿಗೆ ತಿರುಪತಿಗೆ ಮಂಗಳೂರಿನಿಂದ ರೈಲು ಪ್ರಯಾಣ ಆರಂಭಗೊಂಡಿದೆ. ತಿರುಪತಿಗೆ ಹೋದ ಬಳಿಕ ಆಸುಪಾಸಿನ ಕ್ಷೇತ್ರಗಳನ್ನು ಸಂದರ್ಶಿಸಿ ಅದೇ ರೈಲಿನಲ್ಲಿ ಹಿಂದಿರುಗಬಹುದು. ಉಡುಪಿ, ಉ.ಕ.ದ ಪ್ರಯಾಣಿಕರು ಗೋವಾ ರೈಲು ಮೂಲಕ ಮಂಗಳೂರಿಗೆ ತಲುಪಬಹುದು' ಎಂದು ರೈಲ್ವೆ ಯಾತ್ರೀ ಸಂಘದ ಅಧ್ಯಕ್ಷ ಆರ್‌.ಎಲ್‌. ಡಾಯಸ್‌ ತಿಳಿಸಿದ್ದಾರೆ.

English summary
Direct weekly train between coastal town Mangalore to Tirumla Tirupathi introduced on March 1. The Santragachi - Mangalore - Santragachi Vivek Weekly Super Fast Expresses will provide a weekly service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X