ಗಾಂಧಿ vs ಗಾಂಧಿ, ವರುಣ್ ಗೆ 'ರಾಹು'ಲ್ ಕಾಟ

Rahul Gandhi and Varun Gandhi
ನವದೆಹಲಿ, ಮಾ.1: ವರುಣ್ ಗಾಂಧಿ ಕಾಂಗ್ರೆಸ್ ಸೇರ್ತಾರಂತೆ? ಬಿಜೆಪಿಯಿಂದ ವರುಣ್ ಗೆ ಭಾರಿ ಅಪಮಾನವಾಗಿದೆಯಂತೆ? ಇದಕ್ಕೆ ಏನು ಹೇಳುತ್ತಿರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ನ ಹಿರಿಯ ವಕ್ತಾರ ಮನೀಶ್ ತಿವಾರಿ ಅವರು ನಿರುತ್ತರರಾದರು.

ವರುಣ್ ಗಾಂಧಿ ಅವರ ವೈಯಕ್ತಿಕ ಅಭಿಪ್ರಾಯ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಕೆಲ ಕಾಲ ನಂತರ ತಿವಾರಿ ಪ್ರತಿಕ್ರಿಯಿಸಿದರು.

ಆದರೆ, ಬಲ್ಲ ಮೂಲಗಳ ಪ್ರಕಾರ ವರುಣ್ ಕಾಂಗ್ರೆಸ್ ಪ್ರವೇಶಿಸುವುದು ಸೋದರ ರಾಹುಲ್ ಗಾಂಧಿಗೆ ಇಷ್ಟವಿಲ್ಲ. ವರುಣ್ ಪ್ರವೇಶದ ಬಗ್ಗೆ ಕೇಳುವ ಪ್ರಶ್ನೆಗೆ ತಿವಾರಿ ಕೊಟ್ಟ ಉತ್ತರ ರಾಹುಲ್ ಬಾಯಿಂದ ಬಂದಂತೆ ಇತ್ತು.

ಊಹಾಪೋಹ ಸುದ್ದಿಗಳಿಗೆ ನಾವು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ಯಾರಿಗಾದರೂ ಕೋಪ ಬಂದಿದ್ದರೆ, ಅವಮಾನವಾಗಿದ್ದರೆ ಅದಕ್ಕೆ ಅವರೇ ಹೊಣೆ. ಅವರನ್ನೇ ಹೋಗಿ ಕೇಳಿ ಎಂದು ಬಿಟ್ಟರು.

ಪಿಲಿಬಿತ್ ಲೋಕಸಭಾ ಕ್ಷೇತ್ರದಡಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಲು ವರುಣ್ ಗೆ ನಿರಾಕರಿಸುವುದು ವರುಣ್ ಗೆ ಸಹಜವಾಗಿ ಸಿಟ್ಟು ತರಿಸಿದೆ. ಇದರ ಹಿಂದೆ ಬಿಜೆಪಿ ಹಿರಿಯ ನಾಯಕರ ಕೈವಾಡ ಇರುವುದು ಸ್ಪಷ್ಟವಾಗಿದ್ದು, ವರುಣ್ ಕಾಂಗ್ರೆಸ್ ಬಾಗಿಲು ತಟ್ಟಲು ಕಾರಣವಾಗಿದೆ ಎನ್ನಲಾಗಿದೆ.

ಆದರೆ, ಕಾಂಗ್ರೆಸ್ ನಲ್ಲಿ ಪ್ರಾಥಮಿಕ ಸದಸ್ಯರಿಂದ ಲೋಕಸಭಾ ಸದಸ್ಯರ ತನಕ ಎಲ್ಲರ ರಿಮೋಟ್ ಕಂಟ್ರೋ ಲ್ ಈಗ ರಾಹುಲ್ ಕೈಲಿರುವುದು ವರುಣ್ ಗೆ ಮುಳುವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+