• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಕಮಾಲ್, ಪ್ರಗತಿ ಪಥದತ್ತ ಗುಜರಾತ್

By * ಇಂದ್ರೇಶ್
|
ಇಂದು ಗುಜರಾತ್ ಮಿಕ್ಕೆಲ್ಲಾ ರಾಜ್ಯಗಳಿಗಿಂತ ಅಭಿವೃದ್ದಿಯತ್ತ ದಾಪುಗಾಲು ಹಾಕುತ್ತಿದೆ. ಇದಕ್ಕೆ ಗುಜರಾತ್ ನ ಮುಖ್ಯ ಮಂತ್ರಿ ನರೇಂದ್ರ ಮೋದಿ ಅವರ ಅಪಾರ ಪರಿಶ್ರಮ ಕಾರಣ ಎಂದು ಹೇಳಲಾಗುತ್ತಿದೆ. ಮೋದಿ ಅವರ ರಾಜಕೀಯ ವೈರಿಗಳೂ ಗುಜರಾತ್ ನ ಅಭಿವೃದ್ದಿಯನ್ನು ಒಪ್ಪಿಕೊಂಡಿದ್ದಾರೆ.

ಅನೇಕ ರಾಜ್ಯಗಳ ಅಧಿಕಾರಿ, ಶಾಸಕರು, ಸಂಸದರು ಗುಜರಾತ್ ಗೆ ಭೇಟಿ ನೀಡಿ ಅಲ್ಲಿನ ಮಾದರಿಯ ಬೆಳವಣಿಗೆಯನ್ನು ಪರಿಶೀಲಿಸುತ್ತಿದ್ದಾರೆ. ಇಂದು ದೇಶದ ಅತ್ಯಂತ ಮುಂದುವರೆದಿರುವ ರಾಜ್ಯ ಗುಜರಾತ್ ಎಂದರೆ ತಪ್ಪೇನಿಲ್ಲ. 2002ರ ನಂತರದ ಗುಜರಾತ್ ನ ಅಭಿವೃದ್ದಿಯ ಕಿರು ಪರಿಚಯ ಈ ಲೇಖನದಲ್ಲಿದೆ.

ಗುಜರಾತ್ ನ ಜಿಡಿಪಿ ದರ ದೇಶದ ಜಿಡಿಪಿಯ ಶೇಕಡವಾರು ಸರಾಸರಿಗಿಂತ ಎರಡು ಪಟ್ಟು ಹೆಚ್ಚಿದೆ. ಕಳೆದ 2005 ರಿಂದ 10 ರ ವರೆಗೆ ಗುಜರಾತ್ ನ ಜಿಡಿಪಿ ದರ ಶೇ 11.3 ಆಗಿದ್ದು, ಹರ್‍ಯಾಣ ಶೇ 11, ಬಿಹಾರ್ ಶೇ 9.6, ಕರ್ನಾಟಕ ಶೇ 8.5, ಕೇರಳ ಶೇ 8.1, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಶೇ 7.4ರಷ್ಟು ಬೆಳವಣಿಗೆ ದಾಖಲಿಸಿವೆ. [2012ರಲ್ಲಿ ಭಾರತದ ಜಿಡಿಪಿ ದರ ಶೇ.6.1ರಷ್ಟಿದೆ]

ದೇಶದ ಶೇ.5 ರಷ್ಟು ಜನಸಂಖ್ಯೆ, ಶೇ.6ರಷ್ಟು ಭೂ ಪ್ರದೇಶವನ್ನು ಹೊಂದಿರುವ ಗುಜರಾತ್ ದೇಶದ ಕೈಗಾರಿಕಾ ಉತ್ಪಾದನೆಯಲ್ಲಿ ಶೇ.16ರಷ್ಟು ಪಾಲು ಹೊಂದಿದೆ.

2010ರಲ್ಲಿ ಫೋರ್ಬ್ಸ್ ಮ್ಯಾಗಜೀನ್ ಗುಜರಾತ್ ನ ರಾಜಧಾನಿ ಅಹ್ಮದಾಬಾದ್ ನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ನೀಡಿದೆ.

ಕೈಗಾರಿಕಾ ಪ್ರಗತಿ: ಗುಜರಾತ್ ನಲ್ಲಿ ಹತ್ತಿ, ಕಡಲೇಕಾಯಿ, ಕಬ್ಬು, ಖರ್ಜೂರ ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಹಾಗೂ ಪೆಟ್ರೋಕೆಮಿಕಲ್ಸ್ ಕೈಗಾರಿಕೆಗಳೂ ಹೆಚ್ಚಿನ ಸಂಖ್ಯೆಯಲ್ಲಿದೆ.

ಗುಜರಾತ್ ನಲ್ಲಿ ಕ್ಯಾಲ್ಸೈಟ್, ಜಿಪ್ಸಂ, ಮ್ಯಾಂಗನೀಸ್, ಲಿಗ್ನೈಟ್, ಬಾಕ್ಸೈಟ್, ಸುಣ್ಣದ ಕಲ್ಲು, ನಿಕ್ಷೇಪಗಳು ಭಾರಿ ಪ್ರಮಾಣದಲ್ಲಿವೆ. ಕಲೋಲ್, ಖಂಭಟ್, ಹಾಗೂ ಅಂಕಲೇಶ್ವರ ನಗರಗಳು ತೈಲ ಹಾಗು ನೈಸರ್ಗಿಕ ಅನಿಲ ಉತ್ಪಾದನೆಗೆ ಹೆಸರುವಾಸಿಯಾಗಿವೆ.

ಅನೇಕ ಜಾಗತಿಕ ಕಾರು ತಯಾರಿಕಾ ಕಂಪೆನಿಗಳು ಗುಜರಾತ್ ನಲ್ಲಿ ತಮ್ಮ ಉತ್ಪಾದನಾ ಕೇಂದ್ರವನ್ನು ಆರಂಬಿಸಿವೆ. ಜನರಲ್ ಮೋಟಾರ್‍ಸ್ ತನ್ನ ಕಾರುಗಳನ್ನು ಹಲೋಲ್ ನಲ್ಲಿ, ಟಾಟಾ ದ ನ್ಯಾನೋ ಘಟಕ ಸನಂದ್ ನಲ್ಲಿ ಹಾಗೂ ಎಎಮ್ ಡಬ್ಲ್ಯೂ ಟ್ರಕ್ಸ್ ತನ್ನ ಘಟಕವನ್ನು ಭುಜ್ ನಲ್ಲಿ ಹೊಂದಿವೆ.

ಗುಜರಾತ್‌ನಲ್ಲಿ 2009-10 ರಲ್ಲಿ ಪ್ರತಿ ಪ್ರಜೆಯ ತಲಾ ಆದಾಯ 63,961 ರೂಪಾಯಿಗಳಾಗಿತ್ತು.

ಗುಜರಾತ್ ವೈಬ್ರಂಟ್ : 2011ರಲ್ಲಿ ಗುಜರಾತ್ ವೈಬ್ರಂಟ್ ಗುಜರಾತ್ ಸಮ್ಮೇಳನದ ಮೂಲಕ 20.83 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಒಪ್ಪಂದಗಳನ್ನು ಮಾಡಿಕೊಂಡಿದೆ.

ಇದರಲ್ಲಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಹಾಗೂ ಅಹ್ಮದಾಬಾದ್ ಮೂಲದ ಅದಾನಿ ಸಮೂಹ ಹೆಚ್ಚಿನ ಹೂಡಿಕೆ ಒಪ್ಪಂದ ಮಾಡಿಕೊಂಡಿವೆ. ಇದರಲ್ಲಿ 2766 ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ.

ಗುಜರಾತ್ ನಲ್ಲಿ 60 ವಿಶೇಷ ವಿತ್ತ ವಲಯಗಳನ್ನು ಸ್ಥಾಪಿಸಲಾಗಿದೆ. ಹರಳು ಮತ್ತು ಚಿನ್ನಾಬರಣಗಳ ಉದ್ಯಮ ದೇಶದ ಶೇ 80 ರಷ್ಟು ವಜ್ರಗಳನ್ನು ರಫ್ತು ಮಾಡುತ್ತಿದೆ.

ಅಹ್ಮದಾಬಾದ್ ನಲ್ಲಿ 10 ಬೃಹತ್ ಶಾಪಿಂಗ್ ಮಾಲ್ ಗಳಿದ್ದು ಇನ್ನೂ 20 ಮಾಲ್ ಗಳು ತಲೆಯೆತ್ತಲಿವೆ. ದೇಶದ ಒಟ್ಟು ರಫ್ತಿನಲ್ಲಿ ಗುಜರಾತ್ ಸಿಂಹಪಾಲನ್ನು ಹೊಂದಿದ್ದು ಶೇ.14 ರಷ್ಟು ಪಾಲು ಹೊಂದಿದೆ.

ದೇಶದ ಜವಳಿ ಉದ್ಯಮದ ಒಟ್ಟು ರಫ್ತಿನಲ್ಲಿ ಗುಜರಾತ್ ನ ಪಾಲು ಶೇ 12 ಆಗಿದ್ದು, ಗುಜರಾತ್ ನ ಜವಳಿ ಕೈಗಾರಿಕೆ ಉತ್ಪಾದನೆಯಲ್ಲಿ ಶೇ 6 ಪಾಲು ಹೊಂದಿದೆ.

ಗುಜರಾತ್ ದೇಶದ ಅತೀ ದೊಡ್ಡ ಹಾಲು ಉತ್ಪಾದಕ ರಾಜ್ಯವಾಗಿದ್ದು ಇಲ್ಲಿ ಸಹಕಾರಿ ತತ್ವದನ್ವಯ ಹೈನುಗಾರಿಕೆ ಮಾಡಲಾಗುತ್ತಿದ್ದು ಇಂದು ಮಿಲಿಯನ್ ಗೂ ಹೆಚ್ಚು ಜನರು ಇದರಲ್ಲಿ ತೊಡಗಿಕೊಂಡಿದ್ದಾರೆ.

ಏಷ್ಯಾದ ಅತೀ ದೊಡ್ಡ ಡೈರಿ ಅಮುಲ್ ಗುಜರಾತ್ ನ ಸನಂದ್ ನಲ್ಲಿದೆ.

ದೇಶದ ಬಂದರುಗಳಲ್ಲಿ ಪ್ರಮುಖವಾದ ಕಾಂಡ್ಲಾ ಬಂದರು ಗುಜರಾತ್ ನಲ್ಲಿದ್ದು, ಪಿಪಾವಾವ್, ನವ್ ಲಖಿ, ಪೋರ್ ಬಂದರ್ ಹಾಗೂ ಖಾಸಗೀ ಮುಂಡ್ರಾ ಬಂದರು ಕೂಡ ಗುಜರಾತ್ ನಲ್ಲಿದೆ.

ಗುಜರಾತ್ ನಲ್ಲಿ 10 ವಿಮಾನ ನಿಲ್ದಾಣಗಳಿದ್ದು ಅಹ್ಮದಾಬಾದ್ ನ ಸರ್ದಾರ್ ವಲ್ಲಭಬಾಯ್ ಪಟೇಲ್ ಅಂತಾರ್ರಾಷ್ಟ್ರೀಯ ವಿಮಾನ ನಿಲ್ದಾಣ ಅಂತರ್ರಾಷ್ಟ್ರೀಯ ಹಾರಾಟಗಳನ್ನು ನಡೆಸುತ್ತಿದೆ.

ಇಷ್ಟು ಹೆಗ್ಗಳಿಕೆಗಳನ್ನು ಹೊಂದಿರುವ ಗುಜರಾತ್‌ನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಬೃಹತ್ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಹೀಗಾಗಿ ಇದು ದೇಶದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಗುಜರಾತ್ ಸುದ್ದಿಗಳುView All

English summary
Gujarat is a state known for its entrepreneurial spirit. The state has become the epicenter of economic activities in the country. It has emerged as one of the most prosperous and promising states of India. Narendra Modi's vision has helped to grow Gujarat GDP and prosper in all fields.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more