ದೇವರು ಕೊಟ್ರು ಪೂಜಾರಿ ಕೊಡ, ಮಲ್ಯ ಪರಿಸ್ಥಿತಿ

ಆದರೆ, ಖಾಸಗಿ ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಸರ್ಕಾರ ಇನ್ನೂ ಸರಿಯಾದ ನಿರ್ಧಾರ ಕೈಗೊಂಡಿಲ್ಲದಿರುವುದು 'ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ' ಎಂಬ ಪರಿಸ್ಥಿತಿ ಮಲ್ಯರಿಗೆ ಬಂದೊದಗಿದೆ.
ಭಾರತ ಸರಕಾರ ತಾತ್ಕಾಲಿಕ ಒಪ್ಪಿಗೆ ನೀಡಿದ್ದಲ್ಲಿ ಕಿಂಗ್ ಫಿಷರ್‌ನಲ್ಲಿ ಶೇ. 58 ಪಾಲನ್ನು ಹೊಂದಿರುವ ಮಲ್ಯ ಉಳಿದ ಷೇರನ್ನು ವಿದೇಶಿ ವಿಮಾನಯಾನ ಸಂಸ್ಥೆ ಬಿಟ್ಟುಕೊಡುವ ಸಾಧ್ಯತೆ ನಿಚ್ಚಳವಾಗಿದೆ. ಇದರಿಂದ 7 ಸಾವಿರ ಕೋಟೀ ಸಾಲ ಹೊಂದಿರುವ ಮಲ್ಯರಿಗೆ ಕೊಂಚ ರಿಲೀಫ್ ಸಿಗಬಹುದು.
ಎಫ್ ಡಿಐಗೆ ಏಕೆ ವಿಳಂಬ: ಖಾಸಗಿ ವಿಮಾನಯಾನ ಕ್ಷೇತ್ರದಲ್ಲಿ ಶೇ.26ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿ, ಮಲ್ಯರ ಕಿಂಗ್ ಫಿಷರ್ ಗೆ ಜೀವದಾನ ನೀಡಿತ್ತು.
ಈವರೆಗೂ ಕಾರ್ಗೋ ಕ್ಷೇತ್ರದಲ್ಲಿ ಮಾತ್ರ ವಿದೇಶಿ ಬಂಡವಾಳ ಹೂಡಿಕೆಗೆ ಸಮ್ಮತಿಸಲಾಗಿದೆ. ಆದರೆ, ಖಾಸಗಿ ವಿಮಾನಯಾನ ಕ್ಷೇತ್ರದಲ್ಲಿ ಎಫ್ ಡಿಐ ತರುವ ಮೂಲಕ ಸರ್ಕಾರಿ ಸ್ವಾಮ್ಯದ ವಿಮಾನಯಾನಕ್ಕೆ ಪರೋಕ್ಷವಾಗಿ ಹೊಡೆತ ಬೀಳುತ್ತದೆ. ದೇಶದ ಭದ್ರತೆಗೆ ಮಾರಕ ಎಂಬ ನೆಪವೊಡ್ಡಿ ಸರ್ಕಾರ ಮುಂದೂಡುತ್ತಿದೆ.












Click it and Unblock the Notifications