ವಂಡರ್ ಲಾದಲ್ಲಿ ಬೆಂಗಳೂರು ಶಾಲಾ ಬಾಲಕಿ ಸಾವು
ಬೆಂಗಳೂರು,
ಫೆ.28: ರಾಮನಗರ ಜಿಲ್ಲೆಯ ಬಿಡದಿ ಸಮೀಪವಿರುವ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕಿನಲ್ಲಿ ಆಟವಾಡುತ್ತಿದ್ದ ಬೆಂಗಳೂರಿನ ಸೇಂಟ್ ಮಾರ್ಥಾಸ್ ಇಂಗ್ಲಿಷ್ ಶಾಲೆಯ ಶಬ್ರಿನಾ ತಾಜ್ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ನೆಲಮಂಗಲ ಸಮೀಪದ ರೆಸಾರ್ಟಿನಲ್ಲೂ ಮೂರು ತಿಂಗಳ ಹಿಂದೆ ಇಂತಹುದೇ ಅವಘಡ ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು. id="toptextpromo">ಹೇಗಾಯಿತು?:
ಆರ್ ಟಿ ನಗರದಲ್ಲಿರುವ ಸೇಂಟ್ ಮಾರ್ಥಾಸ್ ಶಾಲೆಯಿಂದ ಒಟ್ಟು 150 ಮಕ್ಕಳು ಇಲ್ಲಿಗೆ ಒಂದು ದಿನದ ಪ್ರವಾಸಕ್ಕೆ ಬಂದಿದ್ದರು. 12 ವರ್ಷದ ಶಬ್ರಿನಾ 3 ಅಡಿ ಆಳದ ವೇವ್ ಪೂಲ್ ನಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಯಲ್ಲಿ ಆಟವಾಡುತ್ತಿದ್ದಾಗ ಮುಳುಗಿ ಸಾವಿಗೀಡಾಗಿದ್ದಾಳೆ. ಈಜುಕೊಳದಲ್ಲಿ ಜನಜಂಗುಳಿ ಜಾಸ್ತಿಯಾಗಿ ಮಕ್ಕಳ ಮೇಲೆ ನಿಗಾವಹಿಸುವುದು ಸಾಧ್ಯವಾಗಿಲ್ಲ. ಶಬ್ರಿನಾಳ ತಲೆಗೆ ಪೆಟ್ಟು ಬಿದ್ದು ಶ್ವಾಸಕೋಶದಲ್ಲಿ ನೀರು ತುಂಬಿದ್ದರಿಂದ ಸಾವು ಸಂಭವಿಸಿದೆ. id='are-slot-1' class='oiad oi-axt oiadv'> id='top-searched-articles'>ಈ
ಸಂಬಂಧ ಶಬ್ರಿನಾಳ ಪೋಷಕರು ವಂಡರ್ ಲಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಂಡರ್ ಲಾ ಈಜುಕೊಳದಿಂದ ಶವ ಹೊರತೆಗೆಯಲಾಗಿದ್ದು, ಶವಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಪೋಷಕರೇ, ಬೇಸಿಗೆ
ರಜೆಗೆ
ಕ್ಷಣಗಣನೆ
ಆರಂಭವಾಗಿದೆ.
ಮಕ್ಕಳ
ಬಗ್ಗೆ
ಜಾಗ್ರತೆ
ವಹಿಸಿ.












Click it and Unblock the Notifications