ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಕತ್ತಿದ್ರೆ ಅಸೆಂಬ್ಲಿ ವಿಸರ್ಜಿಸಿ, ಚುನಾವಣೆ ಎದುರಿಸಿ

By Mahesh
|
Google Oneindia Kannada News

HD Revanna
ಹಾಸನ, ಫೆ.24: ಬಿಜೆಪಿಯ ಆಂತರಿಕ ಕಚ್ಚಾಟದಿಂದ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದ್ದು, ಕೂಡಲೇ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ಜೆ.ಡಿ.ಎಸ್. ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ.

ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ದಿನನಿತ್ಯದ ಸಂಕಷ್ಟಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್‍ಯಗಳು ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ವಿಸರ್ಜಿಸುವುದೇ ಸೂಕ್ತ ಎಂದು ರೇವಣ್ಣ ಪ್ರತಿಪಾದಿಸಿದರು.

ರಾಜ್ಯದ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹಸ್ತಕ್ಷೇಪವೇ ಎದ್ದು ಕಾಣುತ್ತಿದೆ. ಡಿ ದರ್ಜೆ ನೌಕರ ನಿಂದ ಹಿಡಿದು ಉನ್ನತ ಸ್ಥಾನದಲ್ಲಿರುವ ಅಧಿಕಾರಿ ವರ್ಗದವರನ್ನು ಯಡಿಯೂರಪ್ಪ ಅವರೇ ನಿಯಂತ್ರಿಸುತ್ತಿದ್ದಾರೆ ಎಂದು ರೇವಣ್ಣ ಹೇಳಿದರು.

ಅಧಿಕಾರಕ್ಕೆ ಬಂದ ದಿನದಿಂದ ಮುಖ್ಯಮಂತ್ರಿ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಿಭಾಯಿಸುವುದೇ ಕಷ್ಟಕರವಾಗಿದೆ. ಅಭಿವೃದ್ಧಿಯತ್ತ ಗಮನಹರಿಸಲು
ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಛೇಡಿಸಿದರು.

ಕಳೆದ 9 ತಿಂಗಳಿನಿಂದ ಲೋಕಾಯುಕ್ತರನ್ನು ನೇಮಕ ಮಾಡಲು ಸರ್ಕಾರಕ್ಕೆ ಸಾಧ್ಯವೇ ಆಗಿಲ್ಲ ಲೋಕೋಪಯೋಗಿ ಇಲಾಖೆಯಲ್ಲಿ ಕಳೆದ ಹತ್ತು ತಿಂಗಳಿನಿಂದ ನಿರೀಕ್ಷಿತ ಕಾಮಗಾರಿ ನಡೆಯುತ್ತಿಲ್ಲ.

ಅಪೆಂಡಿಕ್ಸ್ ಯೋಜನೆಯಡಿ ಬಜೆಟ್ ನಲ್ಲಿ ಅನುಮೋದನೆ ಪಡೆದ ಕಾಮಗಾರಿಗಳು ಇದುವರೆಗೆ ಅನುಷ್ಠಾನಗೊಳಿಸಿಲ್ಲ. ಆನ್ ಲೈನ್ ಮೂಲಕ ಹಂಚುತ್ತಿರುವುದರಿಂದ ಕಾಮಗಾರಿಗಳೆಲ್ಲವೂ ವಿಳಂಬವಾಗುತ್ತಿದೆ ಎಂದು ಸರ್ಕಾರವನ್ನು ರೇವಣ್ಣ ದೂರಿದರು.

English summary
JDS leader HD Revanna said BJP should dissolve assembly and go for fresh poll. Yeddyurappa's dissidence made Sadananda Gowda not to concentrate on development activities of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X