ಮದುವೆಯಿಂದ 29,000 ರು ಗಡಿ ದಾಟಿದ ಚಿನ್ನ
ಮುಂಬೈ,ಫೆ.5:
ಮಧ್ಯಪ್ರಾಚ್ಯದಲ್ಲಿನ ರಾಜಕೀಯ ಅನಿಶ್ಚಿತತೆಯ ಕಾರಣಕ್ಕೆ ಚಿನ್ನದ ಬೆಲೆ ಏರಿಕೆಯಾಗಿವೆ. ಇರಾನಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಚಿನ್ನದಲ್ಲಿ ಹಣ ತೊಡಗಿಸಲು ಹೂಡಿಕೆದಾರರು ಮುಂದಾಗಿದ್ದಾರೆ. ಇನ್ನು ಭಾರತದಲ್ಲಿ ಮದುವೆ ಸೀಸನ್ ಆರಂಭವಾಗಿದೆ. ಇದರಿಂದ ಚಿನ್ನದ ಬೇಡಿಕೆ ಕಳೆದ ವರ್ಷಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಇದೆ. id="toptextpromo">ಚಿನ್ನಕ್ಕೆ
ಬೇಡಿಕೆ ಹೆಚ್ಚಾಗಿರುವುದು ಸಹಜವಾಗಿಯೆ ಬೆಲೆ ಹೆಚ್ಚಳಕ್ಕೆ ಹೇತುವಾಗಿದೆ. ಸದ್ಯಕ್ಕೆ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ.ಗೆ 29,080 ರೂಪಾಯಿ ಆಸುಪಾಸಿನಲ್ಲಿ ಇದೆ.ಇದು ಕಳೆದ 19 ವಾರಗಳಲ್ಲಿನ ಅತ್ಯಧಿಕ ಮತ್ತು ದಿಢೀರ್ ಬೆಲೆ ಹೆಚ್ಚಳವಾಗಿದೆ. id='are-slot-1' class='oiad oi-axt oiadv'> id='top-searched-articles'>
ದೇಶೀಯ
ಚಿನ್ನ ಮಾರುಕಟ್ಟೆಯಲ್ಲಿ ಗುರುವಾರ 10 ಗ್ರಾಂ ಚಿನ್ನದ ಬೆಲೆ 300 ರುಪಾಯಿ ಏರಿಕೆ ಕಂಡಿತು. ಆದರೆ ಬೆಳ್ಳಿ ಬೆಲೆ ಕೆಜಿಗೆ 57,400 ರುಪಾಯಿಯಲ್ಲಿ ಸ್ಥಿರವಾಗಿಯೇ ಇತ್ತು.











Click it and Unblock the Notifications