ಬೆಂಗಳೂರಿಗೆ ನಿತಿನ್ ಗಡ್ಕರಿ ಬರ್ತಾ ಇಲ್ವಂತೆ

Posted By:
Subscribe to Oneindia Kannada
Nitin Gadkari
ನವದೆಹಲಿ, ಫೆ.23: ಬಿಜೆಪಿ ಚಿಂತನ ಮಂಥನ ಸಭೆ ನೆಪದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಯಡಿಯೂರಪ್ಪ ಅವರಿಗೆ ಕೊಂಚ ಹಿನ್ನೆಡೆಯಾಗಿದೆ.

ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರು ಸಭೆ ಬರುವುದು ಅನುಮಾನ ಎಂದು ಸುವರ್ಣ ಸುದ್ದಿ ವಾಹಿನಿ ಮಧ್ಯಾನ್ಹದ ವಾರ್ತೆಯಲ್ಲಿ ಹೇಳಿದೆ.

ಬೆಂಗಳೂರಿಗೆ ಗಡ್ಕರಿ ಹೋಗುವ ಬದಲು, ಕರ್ನಾಟಕ ಬಿಜೆಪಿಯ ಹಿರಿಯ ನಾಯಕರನ್ನು ದೆಹಲಿಗೆ ಕರೆಸಿಕೊಳ್ಳುವಂತೆ ರಾಷ್ಟ್ರೀಯ ನಾಯಕರು ಗಡ್ಕರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಪಕ್ಷದ ಆಂತರಿಕ ಬಿಕ್ಕಟ್ಟನ್ನು ಶಮನಗೊಳಿಸಲು ಇದು ತಕ್ಕ ಸಮಯವಲ್ಲ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮುಗಿಯುವ ತನಕ ಕಾಯುವಂತೆ ಯಡಿಯೂರಪ್ಪ ಬಣಕ್ಕೆ ಸೂಚನೆ ನೀಡುವ ಸಾಧ್ಯತೆಯಿದೆ.

ಶಿವರಾತ್ರಿಗೂ ಯಡಿಯೂರಪ್ಪ ಅವರ ಆರ್ಭಟಕ್ಕೆ ಈಗಾಗಲೇ ತಕ್ಕಮಟ್ಟಿಗೆ ಕಡಿವಾಣ ಹಾಕಿದ್ದ ಬಿಜೆಪಿ ಹಾಗೂ ಆರೆಸ್ಸೆಸ್ ಗೆ ಈಗ ಉಪ ಚುನಾವಣೆಯಲ್ಲಿ ಪಕ್ಷದ ಪ್ರತಿಷ್ಠೆ ಉಳಿಸಿಕೊಳ್ಳುವುದು ಮುಖ್ಯವಾಗಿದೆ.

ಯಡಿಯೂರಪ್ಪ ಅವರ ಪರ ಸಚಿವೆ ಶೋಭಾ ಅವರು ವಕಾಲತ್ತು ವಹಿಸಿಕೊಂಡು ನೀಡಿರುವ ಬೇಡಿಕೆ ಪಟ್ಟಿಗೆ ಸ್ಪಂದಿಸಿರುವ ಹೈ ಕಮಾಂಡ್ ಸಮಸ್ಯೆ ಬಗೆಹರಿಸಲು ಕಾಲಾವಕಾಶ ಬೇಕು ಎಂದು ಉತ್ತರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP President NItin Gadkari is likely to miss BJP meet called by former CM Yeddyurappa in Bangalore. Instead BJP highcommand may call senior Karnataka leaders to Delhi and discuss about the crisis.
Please Wait while comments are loading...