ಶಿವ ಶಿವಾ! ಪಾಕಿಸ್ತಾನದಲ್ಲಿ ಮಹಾ ಶಿವರಾತ್ರಿ

ಪಾಕಿಸ್ತಾನದಲ್ಲಿರುವ ದೇಗುಲಗಳು ಮತ್ತು ಗುರುದ್ವಾರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಇವಾಕ್ಯು ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಭಾರತೀಯ ತೀರ್ಥಯಾತ್ರಿಗಳಿಗೆ ಉಚಿತ ಪ್ರಯಾಣ ಮತ್ತು ವಸತಿ ವ್ಯವಸ್ಥೆ ಮಾಡಿತ್ತು. ಆರು ವರ್ಷಗಳ ಬಳಿಕ ಇದೇ ಮೊದಲ ಸಲ ಭಾರತೀಯ ತೀರ್ಥ ಯಾತ್ರಿಕರು ಕಟಸ್ ರಾಜ್ ದೇಗುಲ ಸಂದರ್ಶಿಸಿದ್ದಾರೆ.
ಚಕ್ವಾಲ್ ಜಿಲ್ಲೆಯಲ್ಲಿರುವ ಕಟಸ್ ರಾಜ್ ದೇಗುಲದಲ್ಲಿ ಮಹಾ ಶಿವರಾತ್ರಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಲಾಯಿತು. 50 ಭಾರತೀಯ ತೀರ್ಥ ಯಾತ್ರಿಕರ ಸಹಿತ ನೂರಾರು ಹಿಂದೂಗಳು ಸೋಮವಾರ ರಾತ್ರಿ ಈ ದೇಗುಲದಲ್ಲಿ ಜಮಾಯಿಸಿದ್ದರು. ಈ ಪ್ರಸಿದ್ಧ ಕ್ಷೇತ್ರಕ್ಕೆ ಪೊಲೀಸರು ವಿಶೇಷ ಬಂದೋಬಸ್ತ್ ಏರ್ಪಡಿಸಿದ್ದರು.
ಪಂಜಾಬ್ ನಗರದಲ್ಲಿರುವ ಹಿಂದೂ ದೇವಾಲಯಗಳಲ್ಲಿ ಹಿಂದೂಗಳು ಶಿವರಾತ್ರಿಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿದ್ದಾರೆ. ಕೆಲವೆಡೆ ಮೊಂಬತ್ತಿ ಮೆರವಣಿಗೆಯನ್ನೂ ಮಾಡಲಾಯಿತು. ಲಾಹೋರ್‌ನಲ್ಲಿ ಬಹುತೇಕ ಹಿಂದೂಗಳು ಕೃಷ್ಣ ಮಂದಿರಕ್ಕೆ ಭೇಟಿಯಿತ್ತರು.












Click it and Unblock the Notifications