ಯಾದಗಿರಿಯ ಚಟ್ನಳ್ಳಿಯಲ್ಲಿ ದೇಹ ಪತ್ತೆ, ಕೊಲೆ ಶಂಕೆ

ಚಾಂದ ಹುಸೇನ್ ಚಟ್ನಳ್ಳಿ ಗ್ರಾಮದಲ್ಲಿ ಕಳೆದ ಐದು ವರ್ಷದಿಂದ ಔಷಧ ಅಂಗಡಿ ನಡೆಸುತ್ತಿದ್ದನು. ಫೆ.19ರಂದು ರಾತ್ರಿ 9ರ ಸುಮಾರಿಗೆ ದೂರನಹಳ್ಳಿಯಿಂದ ಚಟ್ನಳ್ಳಿ ಗ್ರಾಮದ ಕಡೆಗೆ ಹೋಗುತ್ತಿರುವಾಗ ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿರಬಹುದು ಎನ್ನಲಾಗಿದೆ.
ಮೃತನ ತಾಯಿ ಚಾಂದಬಿಬಿ ಚಟ್ನಳ್ಳಿ ಗ್ರಾಮದ ದಳಪತಿ ಎಂಬುವವರ ವಿರುದ್ಧ ದೂರು ನೀಡಿದ್ದಾರೆ ಎಂದು ಸಿಪಿಐ ನ್ಯಾಮಗೌಡ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ನ್ಯಾಮಗೌಡ, ವಡಗೇರಾ ಪಿಎಸ್‌ಐ ಮಹೇಶ ಪಾಟೀಲ್ ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ. ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಮಹಿಳೆ ಶವ ಪತ್ತೆ : ಸೋಮವಾರ ಶಹಾಪುರ್ ತಾಲ್ಲೂಕಿನ ಅನವಾರ್ ಗ್ರಾಮ ಬಳಿಯ ಕಾಲುವೆಯಲ್ಲಿ ಅಪರಿಚಿತ ಮಹಿಳೆಯೊಬ್ಬಳ ಶವ ಪತ್ತೆಯಾಗಿದೆ. ಶಹಾಪುರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ ವಾರ್ತೆ)












Click it and Unblock the Notifications