ವರದಕ್ಷಿಣೆಗಾಗಿ ಎಂಬಿಎ ವಿದ್ಯಾರ್ಥಿನಿ ಮಾಡಿದ್ದೇನು?

ಮೊನ್ನೆ ಶುಕ್ರವಾರ ಇಲ್ಲಿನ ಕುಶೈಗೂಡಾದಲ್ಲಿ ಎಪಿಐಐಸಿ ಕಾಲೊನಿ ಬಳಿ ಮಟಮಟ ಮಧ್ಯಾಹ್ನ ಮಹಿಳೆಯೊಬ್ಬರ ಮಾಂಗಲ್ಯಕ್ಕೆ ಕೈಹಾಕಿದಳು. ಕಮಲಾಪುರಿ ಕಾಲೊನಿಯ ರಮಾ ದೇವಿ-ಶಾರದಾ ಎಂಬ ಅಮ್ಮ-ಮಗಳ ಜೋಡಿಯ ಆ ಪ್ರಯತ್ನಕ್ಕೆ ಅವಳ ತಾಯಿಯೂ ಸಾಥ್ ನೀಡಿದ್ದಳು. ಆದರೆ ಪ್ರಯತ್ನ ವಿಫಲವಾಯಿತು.
ಬುರ್ಕಾ ಧರಿಸಿದ್ದ ಈ ಜೋಡಿ, ಮೊದಲೇ ಲೆಕ್ಕಾಚಾರ ಹಾಕಿ ಕಲ್ಪನಾ ಎಂಬ ಗೃಹಿಣಿಯ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ಮಾಡಿ, ಸರ ಕಸಿಯಲು ಯತ್ನಿಸಿದರು. ಕಲ್ಪನಾ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ನೆರೆಹೊರೆಯವರು ಬಂದು ಕಳ್ಳ ಜೋಡಿಯನ್ನು ಹಿಡಿದರು ಎಂದು ಇನ್ಸ್‌ಪೆಕ್ಟರ್ ವಿ ಶ್ರೀಕಾಂತ್ ಗೌಡ್ ತಿಳಿಸಿದ್ದಾರೆ.
ಅಂದಹಾಗೆ ರಮಾ ದೇವಿ ಕುಶೈಗೂಡಾದಲ್ಲಿರುವ ಸಾಯಿ ಸುಧೀರ್ ಕಾಲೇಜಿನಲ್ಲಿ ದ್ವಿತೀಯ ಎಂಬಿಎ ಓದುತ್ತಿದ್ದಾಳೆ. ಅವಳ ಮದುವೆ ಮಾರ್ಚ 8ಕ್ಕೆ ನಿಗದಿಯಾಗಿತ್ತು. ವರನ ಕಡೆಯವರು 1 ಲಕ್ಷ ರುಪಾಯಿ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದರು.












Click it and Unblock the Notifications