50000 ಕೋಟಿ $ ಕಪ್ಪುಹಣ: ಸ್ವಿಸ್ ಕಿಡಿಕಿಡಿ
ಹೊಸದಿಲ್ಲಿ,
ಫೆ.17: ಭಾರತೀಯರ ಸ್ವಿಸ್ ಅಕೌಂಟ್ 50,000 ಕೋಟಿ ಡಾಲರ್ ಎಂದು ಭಾರತ ಅಧಿಕೃತವಾಗಿ ಹೇಳಿರುವ ಬಗ್ಗೆ ಸ್ವಿಸ್ ದೂತಾವಾಸ ಖಾರದ ಪ್ರತಿಕ್ರಿಯೆ ನೀಡಿದೆ. id="toptextpromo">ಸ್ವಿಸ್
ಕಾತೆಗಳ ಬಗ್ಗೆ ಭಾರತೀಯ ಅಧಿಕಾರಿಗಳು 'ಅಧಿಕೃತ'ವಾಗಿ ಹೇಳಿರುವುದು ವಾಸ್ತವಕ್ಕೆ ದೂರವಾಗಿದೆ. ಅದಕ್ಕಿಂತ ಮುಖ್ಯ ವಿಷಯವೆಂದರೆ ಸ್ವಿಜರ್‌ಲ್ಯಾಂಡ್ ಅನ್ನು ತೆರಿಗೆಗಳ್ಳರ ಸ್ವರ್ಗ ಎಂದು ಬಿಂಬಿಸಲಾಗಿದೆ. ಅದೂ ವಾಸ್ತವಕ್ಕಿಂತ ಬಹು ದೂರವಿದೆ. ಈ ಅಂದಾಜು ಮತ್ತು ಅಂಕಿ ಅಂಶಗಳಿಗೆ ಸಾಕಷ್ಟು ಸಾಕ್ಷಗಳ ಕೊರತೆ ಇದೆ ಹಾಗೂ ಇಂತಹವುಗಳನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ಸ್ವಿಸ್ ದೂತಾವಾಸ ಹೇಳಿದೆ. id='are-slot-1' class='oiad oi-axt oiadv'> id='top-searched-articles'>ಕಳೆದ
ಫೆ. 13ರಂದು ದೆಹಲಿಯಲ್ಲಿ ನಡೆದ ಇಂಟರ್‌ಪೋಲ್ ಅಂತಾರಾಷ್ಟ್ರೀಯ ಸಮಾವೇಶವೊಂದರಲ್ಲಿ ಮಾತನಾಡಿದ ಸಿಬಿಐ ನಿರ್ದೇಶಕ ಎ.ಪಿ.ಸಿಂಗ್, ಸುಮಾರು 500 ಬಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಭಾರತೀಯರು ತೆರಿಗೆಗಳ್ಳರ ಸ್ವರ್ಗ ದೇಶದಲ್ಲಿ ಹೂಡಿಕೆ ಮಾಡಿದ್ದಾರೆಂದು ಅಂದಾಜಿಸಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸದೆಯೇ ಈ ಕುರಿತು ಹೇಳಿಕೆ ನೀಡಿರುವ ಸ್ವಿಸ್, ನಮ್ಮ ದೇಶ ತೆರಿಗೆಗಳ್ಳರ ಸ್ವರ್ಗವಲ್ಲ ಎಂದಿದೆ.











Click it and Unblock the Notifications