ನಮ್ಮಲ್ಲಿ ಠೇವಣಿ ಇಡಬೇಡಿ: ಮಣಪ್ಪುರಂ ಫೈನಾನ್ಸ್
ಮುಂಬೈ,ಫೆ.16:
ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುತ್ತಿದ್ದ ಕೇರಳ ಮೂಲದ ಮಣಪ್ಪುರಂ ಫೈನಾನ್ಸ್ ಕಂಪನಿ ಬಗ್ಗೆ ಎಚ್ಚರ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕಿವಿ ಹಿಂಡಿದ್ದೇ ತಡ ಕಂಪನಿಯು 'ಇಲ್ಲ ಇಲ್ಲ ನಮ್ಮಲ್ಲಿ ಯಾರೂ ಠೇವಣಿ ಇಡ್ತಾನೂ ಇಲ್ಲ. ಇಡಲೂ ಬೇಡಿ' ಎಂದು ಅಲವತ್ತುಕೊಂಡಿದೆ. 2011ರ ಮಾರ್ಚ್ ತಿಂಗಳಿನಿಂದಲೇ ಸಾರ್ವಜನಿಕರಿಂದ ಠೇವಣಿ ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಣಪ್ಪುರಂ ಫೈನಾನ್ಸ್ ಸ್ಪಷ್ಟಪಡಿಸಿದೆ. id="toptextpromo">ಈ
ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ವ್ಯಕ್ತಪಡಿಸಿರುವ ಕಳವಳಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿಯೂ ಸಂಸ್ಥೆ ತಿಳಿಸಿದೆ. ಠೇವಣಿ ಸ್ವೀಕರಿಸದ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ (ಎನ್‌ಬಿಎಫ್‌ಸಿ) ಮಣಪ್ಪುರಂ ಫೈನಾನ್ಸ್ ಸಂಸ್ಥೆಯು ನಿಯಮ ಉಲ್ಲಂಘಿಸಿ ಸಾರ್ವಜನಿಕರಿಂದ ಠೇವಣಿ ಸ್ವೀಕರಿಸುತ್ತಿದೆ. ಇದು ಶಿಕ್ಷಾರ್ಹ ಅಪರಾಧ ಎಂದು ಆರ್‌ಬಿಐ ಕಳೆದ ವಾರ ಎಚ್ಚರಿಕೆ ನೀಡಿತ್ತು. id='are-slot-1' class='oiad oi-axt oiadv'> id='top-searched-articles'>ಆರ್‌ಬಿಐ
ಎಚ್ಚರಿಕೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಭೆ ಸೇರಿ ಚರ್ಚಿಸಿದ ಸಂಸ್ಥೆಯ ಆಡಳಿತ ಮಂಡಳಿಯು ಈ ಸ್ಪಷ್ಟನೆ ನೀಡಿದೆ. ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಅಥವಾ ಇದೇ ಸಮೂಹದ ಅಂಗ ಸಂಸ್ಥೆಯಾಗಿರುವ ಮಣಪ್ಪುರಂ ಅಗ್ರೊ ಫಾರ್ಮ್ಸನಲ್ಲಿ (ಎಂಎಜಿಆರ್‌ಒ) ಠೇವಣಿ ಇಟ್ಟರೆ ಅದಕ್ಕೆ ಸಾರ್ವಜನಿಕರೇ ಹೊಣೆಗಾರರು ಎಂದು ಆರ್‌ಬಿಐ ತಿಳಿಸಿದೆ.











Click it and Unblock the Notifications