ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಹೆಚ್ಚುತ್ತಿರುವ ಅಗ್ನಿ ದುರಂತ: ಬೆಂಗಳೂರಿಗೆ ಹೊಸ ನೀತಿ

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  bbmp-to-have-new-fire-safety-norms
  ಬೆಂಗಳೂರು, ಫೆ.15: ಬೆಂಗಳೂರು ಇತ್ತೀಚೆಗೆ ಅಗ್ನಿ ದುರಂತಗಳ ರಾಜಧಾನಿಯೂ ಆಗುತ್ತಿದೆ. ಇನ್ನೇನು ಬೇಸಿಗೆ ಕಾಲ ಅಡಿಯಿಡುತ್ತಿದೆ. ಈ ಸಂದರ್ಭದಲ್ಲಿ, ಬೆಂಗಳೂರಿನ ಸುರಕ್ಷತೆ ಬಗ್ಗೆ ಒಂದಷ್ಟು ಕಾಳಜಿ ವ್ಯಕ್ತವಾಗಿದ್ದು, ದೊಡ್ಡ ದೊಡ್ಡ ಕಟ್ಟಡಗಳು ಬಿಬಿಎಂಪಿಯಿಂದ ನಿರಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ಇಂತಹ NOC ಪಡೆದ ನಂತರವೂ ಅಗ್ನಿ ದುರಂತಗಳು ಸಂಭವಿಸಿದರೆ ಅಗ್ನಿಶಾಮಕ ದಳ ಅಂತಹ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಬಹುದಾಗಿದೆ.

  ನಿವಾಸಿಗಳ ಸುರಕ್ಷತೆಗೆ ಆದ್ಯ ಗಮನಹರಿಸಲಾಗಿದ್ದು, 15 ಮೀಟರಿಗಿಂತ ಹೆಚ್ಚು ಎತ್ತರವಿರುವ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆ ಸಂಬಂಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ರಾಜ್ಯ ಸರಕಾರ ಹೊಸದಾಗಿ ರೂಪಿಸಿದೆ. ಹೈಕೋರ್ಟಿನ ಮಧ್ಯಂರ ಆದೇಶವನ್ನು ಪರಿಗಣಿಸಿ, ಸರಕಾರ ಈ ನೀತಿಯನ್ನು ಜಾರಿಗೆಗೊಳಿಸಿದೆ.

  ಇನ್ನು ಮುಂದೆ, ಅಗ್ನಿಶಾಮಕ ದಳ ತಪಾಸಣೆ ನಡೆಸಿ, NOC ನೀಡಿದ ನಂತವರೇ ಬಿಬಿಎಂಪಿ ತನ್ನ ಅಂತಿಮ ಅನುಮೋದನೆ ನೀಡಬೇಕಾಗಿದೆ. ಅಗ್ನಿಶಾಮಕ ಇಲಾಖೆಯ ನಿರೀಕ್ಷಕರು ವರ್ಷಕ್ಕೆ ಒಂದೆರಡು ಬಾರಿ ಅನಿರೀಕ್ಷಿತ ತಪಾಸಣೆ ನಡೆಸಿ, ವರದಿ ಸಲ್ಲಿಸಬೇಕು. ಸ್ಥಳೀಯ ಸಂಸ್ಥೆಗಳು (ಬಿಬಿಎಂಪಿ) ನಿಗದಿಗೊಳಿಸಿರುವ ಕಾನೂನು ಕಟ್ಟಳೆಗಳನ್ನು ಪಾಲಿಸಲಾಗಿದೆಯಾ ಎಂಬುದರ ಬಗ್ಗೆಯೂ ವರದಿ ಸಲ್ಲಿಕೆಯಾಗಬೇಕಾಗುತ್ತದೆ. ವರದಿಯಲ್ಲಿ ಲೋಪಗಳು ಪತ್ತೆಯಾದಲ್ಲಿ occupancy certificate ತಡೆಹಿಡಿಯಲಾಗುತ್ತದೆ.

  ಅಗ್ನಿಶಾಮಕ ಇಲಾಖೆಯ ಜಿಲ್ಲಾ ಅಧಿಕಾರಿ ಇಂತಹ NOC ನೀಡುವ ಅಧಿಕಾರ ಹೊಂದಿರುತ್ತಾರೆ. ಈಗಾಗಲೇ ವಾಸವಿರುವ ಕಟ್ಟಡಗಳೂ ಇಲಾಖೆಯಿಂದ NOC ಪಡೆಯುವುದು ಕಡ್ಡಾಯವಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Fire safety measures in high-rise buildings and public structures are a must for obtaining a No Objection Certificate (NOC) form local bodies in Bangalore. The state government has issued this notification in the wake of the High Court’s interim order. 

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more