ಪ್ರೀತಿಯಿಂದ ಕೇಳು ನೂರೇಕೆ ಸಾವಿರ ಕೋಟಿ ಕೊಡಬಲ್ಲೆ

want-money-ask-politely-kheny-told-ravi-pujari
ಬೆಂಗಳೂರು, ಫೆ.14: 'ಆಸ್ಟ್ರೇಲಿಯಾದಿಂದ ಮಾತ್ನಾಡ್ತಿದ್ದೀನಿ. ದುಡ್ ಮಡಗು' ಎಂದು ಗಡಸು ಧ್ವನಿಯೊಂದು ಗುಡುಗಿದಾಗ ಯಾರಿಗೇ ಆಗಲಿ ಥರಥರ. ಆದರೆ ನೈಸ್ ಅಧಿಪತಿ, ಕೋಟ್ಯಧಿಪತಿ ಅಶೋಕ್ ಖೇಣಿ 'ಅದೆಲ್ಲ ಆಗಾಕಿಲ್ಲ. ನೀನ್ಯಾವ ದೇವಸ್ಥಾನದ ಪೂಜಾರಿ ಹೋಗ್' ಎಂದು ಗದುಮಿದ್ದಾರೆ.

ವಿಷಯ ಏನಪಾ ಅಂದರೆ ಭೂಗತ ಪಾತಕಿ, ಕರ್ನಾಟಕದ ರವಿ ಪೂಜಾರಿ ಹಣ ಕೀಳಲು ಆಸ್ಟ್ರೇಲಿಯಾದಿಂದ ಇತ್ತೀಚೆಗೆ ಖೇಣಿಗೆ ದೂರವಾಣಿ ಕರೆ ಮಾಡಿ ಬೆದರಿಕೆಯೊಡ್ಡಿದ್ದ. ಅದಕ್ಕೆ ನೈಸ್ ಖೇಣಿ ಹೀಗೆ ಗೂಸಾ ಕೊಟ್ಟಿದ್ದಾರೆ.

'ಎಂಥೆಂಥಾ ಘಟಾನುಘಟಿಗಳನ್ನೋ ಎದುರು ಹಾಕಿಕೊಂಡಿದ್ದೇನೆ. ಇದೇ ನೈಸ್ ರಸ್ತೆಯಲ್ಲಿ ಅಂತ ಬೆದರಿಕೆಗಳನ್ನೆಲ್ಲ ಹೊಸಕಿ ಹಾಕಿದ್ದೇನೆ. ಇನ್ನು ನೀನ್ಯಾವ ತೋಲಾಂಡ ರಾಯ' ಎಂದು ರವಿಗೆ ಪೂಜೆ ಮಾಡಿದರಂತೆ. ಇದನ್ನು ಸ್ವತಃ ಖೇಣಿ ಅವರೇ 'ಬೆಂಗಳೂರು ಮಿರರ್' ಪತ್ರಿಕೆಗೆ ತಿಳಿಸಿದ್ದಾರೆ.

'ಅವ 100 ಕೋಟಿ ಕೊಡಿ ಅಂತ ಆವಾಜ್ ಹಾಕಿದ. ಧಮಕಿ ಎಲ್ಲ ಬೇಡ. ಪ್ರೀತಿಯಿಂದ ಕೇಳು ನೂರೇಕೆ ಸಾವಿರ ಕೋಟಿಯೇ ಕೊಡಬಲ್ಲೆ. ಧಮಕಿ ಹಾಕಿದೆಯೋ ಪುಡಿಗಾಸು ಕೊಡೊಲ್ಲ, ಹುಷಾರ್' ಎಂದು ಖೇಣಿ ಸಾಹೇಬರು ರವಿಗೆ ಪ್ರೀತಿಯಿಂದ ತಿಳಿಹೇಳಿದ್ದಾರೆ.

'ನವೆಂಬರಿನಿಂದೀಚೆಗೆ ಅವ (ರವಿ) ಬರೋಬ್ಬರಿ ನಾಲ್ಕು ಬಾರಿ ಕರೆ ಮಾಡವ್ನೆ. ಬೆಂಗಳೂರು ಪೊಲೀಸ್ ಕಮೀಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರಿಗೆ ದೂರು ನೀಡಿರುವೆ. 'ಒಂದು ಸಲ ಕರೆ ಮಾಡಿದ. ನಾನು ಮಾಫಿಯಾ ಡಾನ್. ರವಿ ಪೂಜಾರಿ ಮಾತ್ನಾಡ್ತಿದ್ದೀನಿ. ಹಣ ಕೊಡು' ಎಂದು ಧಮ್ಕಿ ಹಾಕಿದ. ನಾನೊಂಚೂರೂ ವಿಚಲಿತನಾಗಲಿಲ್ಲ. ಎಂತೆಂಥವರನ್ನೋ ಎದುರಿಸಿದ್ದೇನೆ. ಇಂಥ ಚಿಲ್ರೆಗಳ ಬಗ್ಗೆ ತಲೆಕೆಡಿಸಿಕೊಳ್ಳಲಾ. ಅದು ನನ್ನ ಸ್ಟೈಲ್ ಅಲ್ಲ' ಎಂದೇ ಮಾರುತ್ತರ ಕೊಟ್ಟೆ ಎಂದು ಖೇಣಿ ಪತ್ರಿಕೆಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+