• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಧನೂರಿನವ ಪಾಕ್ ರಬ್ಬಾನಿಗೆ ಕರೆ ಮಾಡಿದನೇ?

By Srinath
|
ರಾಯಚೂರು, ಫೆ 13: ಪ್ರಮಾದವಷಾತ್ ರಾಯಚೂರಿನ ಯುವಕನೊಬ್ಬ ಮಾಡಿದ ದೂರವಾಣಿ ಕರೆಯೊಂದು ನೇರವಾಗಿ ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಕಿವಿಗೆ ತಲುಪಿ, ಫಜೀತಿಗಿಟ್ಟುಕೊಂಡಿದೆ. ಸಿಂಧನೂರು ತಾಲೂಕಿನ ಬುದ್ದಿನಿ ಗ್ರಾಮದಿಂದ ಅಮರೇಶ ಎಂಬ ಯುವಕ ರಬ್ಬಾನಿಗೆ ಕಾಲ್ ಮಾಡಿದ್ದೂ ಅಲ್ಲದೆ ಅಶ್ಲೀಲವಾಗಿ ಮಾತನಾಡಿದ್ದು ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿದೆ.

2 ತಿಂಗಳ ಹಿಂದೆ ಏನಾಯಿತೆಂದರೆ ... ಅಮರೇಶನ ತನ್ನ ಮೊಬೈಲಿನಿಂದ ಯಾರಿಗೋ ಕರೆ ಮಾಡಿದ್ದಾನೆ. ಆದರೆ ತಾನು ಮಾಡಿದ ಸಂಖ್ಯೆಗೆ ಹೆಚ್ಚುವರಿಯಾಗಿ ಎರಡು ಸೊನ್ನೆಗಳನ್ನು ಸೇರಿಸಿ ಮಾಡಿದ್ದು ಯಡವಟ್ಟಾಗಿದೆ. ಕೋಚಿಂಗ್ ಸಂಸ್ಥೆಯೊಂದರಲ್ಲಿ ಅಸಿಸ್ಟೆಂಟ್ ಆಗಿರುವ ಅಮರೇಶ ಗಂಗಪ್ಪ ಬುದ್ದಿನಿ ಮಾಡಿದ ಪ್ರಮಾದ ನೇರವಾಗಿ ಪಾಕಿಸ್ತಾನದ ಸಚಿವೆಯ ಕೈಜಗ್ಗಿದೆ. ಆಕೆ ತಕ್ಷಣ ಗುಪ್ತಚರ ಇಲಾಖೆ ಸೇರಿದಂತೆ ಎಲ್ಲರನ್ನೂ ಜಾಗೃತಗೊಳಿಸಿ, ವಿಚಾರಣೆ ನಡೆಸುವಂತೆ ಆಜ್ಞಾಪಿಸಿದ್ದಾರೆ.

ಅದು ದೆಹಲಿ ಗುಪ್ತಚರವನ್ನೂ ಜಾಗೃತಗೊಳಿಸಿದೆ. ಅಲ್ಲಿಂದ ನೇರವಾಗಿ ಬೆಂಗಳೂರಿನ ಸಿಸಿಬಿಗೆ ಕರೆ ಬಂದಿದೆ. ಸರಿ ಸಿಸಿಬಿ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ನೇತೃತ್ವದ ತಂಡ ಭಾನುವಾರ ಅಮರೇಶನ ಮನೆಯ ಕದ ತಟ್ಟಿದೆ. ಅಮರೇಶನ ಗೋಳಾಟ ಕಂಡು ಇವ ಅಂಥವನಲ್ಲ ಅಂತ ತೀರ್ಮಾನಿಸಿ, ಬೆದರಿದ್ದ ಅಮರೇಶನ ಕುಟುಂಬಕ್ಕೆ ಧೈರ್ಯ ತುಂಬಿ ಬರಿಗೈಯಲ್ಲಿ ವಾಪಸಾಗಿದ್ದಾರೆ. ಪ್ರಕರಣವೂ ಅಲ್ಲಿಗೆ ಮುಕ್ತಾಯವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ರಾಯಚೂರು ಸುದ್ದಿಗಳುView All

English summary
A youngster (Amaresh ) hailing from remote Buddini village in Sindhanur taluk of Raichur district landed in trouble when it was alleged that he called up Pakistan's foreign minister Hina Rabbani Khar and used filthy language.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more