ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾಥ 1700 ಕೋಟಿ ವಾಪಸ್ ಮಾಡಿ:ಆರ್ ಬಿಐ

By Srinath
|
Google Oneindia Kannada News

refund-unclaimed-deposits-of-rs-1700-cr-rbi
ಮುಂಬೈ, ಫೆ.13: ದೇಶದ ನಾನಾ ಬ್ಯಾಂಕ್‌ಗಳಲ್ಲಿ ಇರುವ 1700 ಕೋಟಿ ರೂ. ಗಳಷ್ಟು ಮೊತ್ತದ ಠೇವಣಿಗಳಿದ್ದು, ಅದರ ವಾರಸುದಾರರನ್ನು ಇನ್ನು ನಾಲ್ಕು ತಿಂಗಳಲ್ಲಿ (ಜೂ. 30ರೊಳಗೆ) ಪತ್ತೆಹಚ್ಚಿ ಆ ಹಣ ಮರಳಿಸಲು ಕ್ರಮ ಕೈಗೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ.

ಈ ಕಾರ್ಯನಿಟ್ಟಿನಲ್ಲಿ ಇಂಟರ್ನೆಟ್‌ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆಯೂ ಅದು ಸಲಹೆ ನೀಡಿದೆ. ಕೆಲವು ದಶಕಗಳಿಂದ ಕ್ರೋಢೀಕರಣವಾಗುತ್ತಿರುವ ಈ ಮೊತ್ತ 1.03 ಕೋಟಿ ಬ್ಯಾಂಕ್ ಶಾಖೆಗಳಲ್ಲಿ ಭದ್ರವಾಗಿದೆ. ಅತ್ಯಧಿಕವಾಗಿ ಎಸ್ ಬಿಐ ಸಮೂಹ ಬ್ಯಾಂಕುಗಳಲ್ಲಿ 279.7 ಕೋಟಿ ರೂ. ಅನಾಥ ಹಣವಿದೆ. ಬ್ಯಾಂಕ್ ಖಾತೆಗಳಲ್ಲಿನ ಹಣ ಮರಳಿ ಪಡೆಯದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬಗ್ಗೆಯೂ ಕೇಂದ್ರೀಯ ಬ್ಯಾಂಕ್ ಕಳವಳ ವ್ಯಕ್ತಪಡಿಸಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಬ್ಯಾಂಕ್‌ಗಳು, ಸಕ್ರಿಯವಾಗಿಲ್ಲದ ಮತ್ತು ವಾರಸುದಾರರು ಇಲ್ಲದ (unclaimed and inoperative deposit) ಖಾತೆಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಎಲ್ಲಿ ಇದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ ಅವರಿಗೆ ಹಣ ಮರಳಿಸಲು ಮುಂದಾಗಬೇಕು. ಈ ಉದ್ದೇಶಕ್ಕೆ ಬ್ಯಾಂಕ್‌ಗಳು, 10 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿವರೆಗೆ ಸ್ಥಗಿತಗೊಂಡಿರುವ ಖಾತೆಗಳ ವಿವರಗಳನ್ನು ತನ್ನಅಂತರ್ಜಾಲ ತಾಣಗಳಲ್ಲಿ ಪ್ರಕಟಿಸಬೇಕು ಎಂದು ಆರ್‌ಬಿಐ ಸೂಚಿಸಿದೆ.

ವಿವಿಧ ಬ್ಯಾಂಕ್‌ಗಳಲ್ಲಿ 2010ರ ಡಿಸೆಂಬರ್ ತಿಂಗಳಾಂತ್ಯದವರೆಗೆ ಒಂದು ಕೋಟಿಗೂ ಹೆಚ್ಚಿನ ಸಂಖ್ಯೆಯ ಖಾತೆಗಳು ಸ್ಥಗಿತಗೊಂಡಿವೆ. 1723.24 ಕೋಟಿ ರೂ.ಗಳಷ್ಟು ಹಣ ಉಳಿದಿದೆ. ಈ ಸಕ್ರಿಯವಾಗಿಲ್ಲದ ಖಾತೆಗಳಲ್ಲಿನ ಹಣವನ್ನು ಸಂಬಂಧಿಸಿದ ವಾರಸುದಾರರು ಯಾವ ರೀತಿ ಮರಳಿ ಪಡೆಯಬೇಕು, ಇಂತಹ ಖಾತೆಗಳನ್ನು ಮತ್ತೆ ಹೇಗೆ ಕಾರ್ಯಾರಂಭ ಮಾಡಬೇಕು, ಹಣ ಮರಳಿ ಪಡೆಯಲು ಯಾವ ದಾಖಲೆಗಳನ್ನು ಸಲ್ಲಿಸಬೇಕು ಮತ್ತಿತರ ವಿವರಗಳನ್ನೂ ಬ್ಯಾಂಕ್‌ನ ಇಂಟರ್ನೆಟ್‌ ತಾಣದಲ್ಲಿ ಪ್ರಕಟಿಸಬೇಕು.

English summary
The Reserve Bank of India (RBI) has directed banks to disclose the list of unclaimed and inoperative deposits of Rs 1,700 cr. Over the last few decades, the unclaimed amount spread over 1.03 crore bank accounts, has risen to Rs 1,700 crore with India's largest bank, SBI and its associates topping the list with unclaimed deposits of 279.7 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X