ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಎಕರೆಯಲ್ಲಿ ವಿ ನಿಲ್ದಾಣ, ಗದಗಕ್ಕೆ ಸೌಭಾಗ್ಯ

By Mahesh
|
Google Oneindia Kannada News

Chikmagalur, Gadag Airport survey
ಬೆಂಗಳೂರು, ಫೆ.12: ಕೇವಲ 100 ಎಕರೆಯಲ್ಲೇ ವಿಮಾನ ನಿಲ್ದಾಣ ನಿರ್ಮಿಸಿ, ಮೂರು ಜಿಲ್ಲೆಗಳನ್ನು ವಿಮಾನಯಾನ ಜಾಲಕ್ಕೆ ಸೇರುವ ಯೋಜನೆ ಪ್ರಗತಿಯಲ್ಲಿದೆ. ಕರ್ನಾಟಕ ಸರ್ಕಾರದ ಯೋಜನೆ ಮೇರೆಗೆ ಚಿಕ್ಕಮಗಳೂರು, ಗದಗ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ.

ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ನಡೆಸುತ್ತಿರುವ ಸಮೀಕ್ಷೆ ಕಾರ್ಯ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸಣ್ಣ ವಿಮಾನ ನಿಲ್ದಾಣಗಳಲ್ಲಿ ಚಾರ್ಟೆರ್ಡ್ ಏರ್ ಕ್ರಾಫ್ಟ್ ಹಾಗೂ 8 ರಿಂದ 10 ಸೀಟಿನ ಸಣ್ಣ ವಿಮಾನಗಳು ಹಾರಾಟ ಆರಂಭಿಸಲಿದೆ.

ಮೇ ತಿಂಗಳಲ್ಲಿ ಗುಲ್ಬರ್ಗಾ ವಿಮಾನ ನಿಲ್ದಾಣ ಹಾಗೂ ಜುಲೈ ತಿಂಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಖಾತ್ರಿ ಹೇಳಿದ್ದಾರೆ.

ವಿಮಾನ ಜಾಲ ವಿಸ್ತರಣೆ: ಮೈಸೂರು, ಬೆಳಗಾವಿ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳ ಜಾಲಕ್ಕೆ ಹೊಸ ಸಣ್ಣ ವಿಮಾನ ನಿಲ್ದಾಣಗಳನ್ನು ಸೇರಿಸಲಾಗುವುದು. ಸದ್ಯಕ್ಕೆ ರಾಜ್ಯದಲ್ಲಿ ಹಾರಾಟ ಆರಂಭಿಸಿದ್ದ ಏಕೈಕ ವಿಮಾನಯಾನ ಸಂಸ್ಥೆ ಕಿಂಗ್ ಫಿಷರ್ ತನ್ನ ವಿಮಾನಗಳ ಹಾರಾಟ ನಿಲ್ಲಿಸಿದೆ.

ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳನು ಉನ್ನತ ದರ್ಜೆಗೇರಿಸಲು 150 ಕೋಟಿ ರು ವೆಚ್ಚವಾಗುತ್ತದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(AAI) ಪ್ರಸ್ತಾವನೆ ಸಲ್ಲಿಸಿದೆ.

ಯೋಜನಾ ಆಯೋಗ ಕೂಡಾ ಮುಂಬರುವ 5 ವರ್ಷಗಳಲ್ಲಿ ಸುಮಾರು 30 ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಮುಂದಾಗಿದೆ. ಮುಂದಿನ ವರ್ಷದೊಳಗೆ ಪ್ರಯಾಣಿಕರ ಸಂಚಾರ ದಟ್ಟಣೆ ಸಂಖ್ಯೆ 240 ದಾಟುವ ನಿರೀಕ್ಷೆ ಹೊಂದಲಾಗಿದೆ.

English summary
Karnataka Government is planning to build airports on land of just 100 acres. The Infrastructure Development Department is carrying out surveys in Gadag, Chikmagalur and Raichur districts said Rajkumar Khatri, Principal Secretary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X